Statevijayapur

ವಿಕೆಂಡ್ ಕರ್ಪ್ಯೂಗೆ ಫೂಲ್ ರೆಸ್ಪಾನ್ಸ್: ಇಂಡಿ ಪಟ್ಟಣ ಸಂಪೂರ್ಣ ಸ್ತಬ್ಧ


ಇಂಡಿ: ರಾಜ್ಯಾದ್ಯಂತ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ವಿಕೆಂಡ್  ಕರ್ಫ್ಯೂ ಅನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ರಾಜ್ಯಾದ್ಯಂತ ಎಲ್ಲ  ಕಡೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲ ಸೇವೆಗಳು ಬಂದ್ ಆಗಿದ್ದು, ವಿಕೆಂಡ್ ಕರ್ಫ್ಯೂಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಹೌದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲೂ ವಿಕೆಂಡ್ ಕರ್ಪ್ಯೂಗೆ ಫೂಲ್ ರೆಸ್ಪಾನ್ಸ್ ಸಿಗುತ್ತಿದೆ. ಅಗತ್ಯ ಸೇವೆಗಳಿಗೆ ಮಾತ್ರ ಸಾರ್ವಜನಿಕರು ಮನೆಯಿಂದ ಹೊರಬರುತ್ತಿದ್ದು, ಪಟ್ಟಣದ ಜನರು ಮನೆಯಲ್ಲಿದ್ದು, ಕೋವಿಡ್ ವೈರಾಣುವಿಗೆ ಕಟ್ಟಿಹಾಕಲು ಸರ್ಕಾರದ ವಿಕೆಂಡ್ ಕರ್ಫ್ಯೂಗೆ ಸಾಥ್ ಕೊಡುತ್ತಿದ್ದಾರೆ…

ಇಂಡಿ ಪಟ್ಟಣದಲ್ಲಿ ನಿನ್ನೆಯಿಂದಲ್ಲೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಿ, ಸುಖಾಸುಮ್ಮನೆ ಸಾರ್ವಜನಿಕರು  ಓಡಾಡದಂತೆ ತಹಶೀಲ್ದಾರ್ ಕುಲಕರ್ಣಿ, ಡಿವೈಎಸ್ಪಿ ಶ್ರೀಧರ ದೊಡ್ಡಿ ಹಾಗೂ ಸಿಪಿಐ ಅವರ ನೇತೃತ್ವದಲ್ಲಿ ಪೋಲಿಸ್ ಸರ್ಪಗಾವಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ…

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿವೈಎಸ್ಪಿ ಶ್ರೀಧರ ದೊಡ್ಡಿ ಅವರು, ಶನಿವಾರ ಹಾಗೂ ಭಾನುವಾರದ ವಿಕೆಂಡ್ ಕರ್ಫ್ಯೂಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆವಿಲ್ಲ. ಸಾರ್ವಜನಿಕರ ತೊಂದರೆಗೆ ನಮಗೆ ಕರೆ ಮಾಡಬಹುದು. ಜತೆಗೆ ನಮ್ಮ ಪೋಲಿಸ್ರು ಸಾರ್ವಜನಿಕರಿಗೆ ಧ್ವನಿವರ್ಧಕಗಳ ಮೂಲಕ ಕೋವಿಡ್ ನಿಯಂತ್ರಣಕ್ಕಾಗಿ ತಪ್ಪದೆ  ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು


Leave a Reply