BelagaviState

ಕೋವಿಡ್ ರೋಗಿಗಳಿಗಾಗಿ ವಿಶೇಚ 10 ಆ್ಯಂಬುಲೆನ್ಸ್‍ಗಳು ರೆಡಿ : ಸಚಿವ ಜೋಶಿ


ಹುಬ್ಬಳ್ಳಿ : ಕೋವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಆ್ಯಂಬುಲೆನ್ಸ್‍ಗಳನ್ನು ಸಿದ್ದಪಡಿಸಲಾಗಿದೆ,
ಜನರು ಜಾಗೃತರಾಗಿರಬೇಕು, ಯಾರೂ ಭಯಪಡುವ ಅಗತ್ಯವಿಲ್ಲ .ಅನಗತ್ಯವಾಗಿ ಜನರು ರಸ್ತೆಯಲ್ಲಿ ಓಡಾಡುವುದು ಬೇಡ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ
ಅನಿರೀಕ್ಷಿತವಾಗಿ ಬಂದ ಈ ತುರ್ತು ಪರಿಸ್ಥಿತಿಯನ್ನ ದೈರ್ಯದಿಂದ ಎದುರಿಸಬೇಕಿದೆ,
ಜನರು ಅಗತ್ಯಕ್ಕಿಂತಲೂ ಹೆಚ್ಚು ಭಯ ಭೀತಿ ಗೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ರಾಜ್ಯಗಳಿಗೆ ಅಗತ್ಯ ವ್ಯಾಕ್ಸಿನ್ ಪೂರೈಕೆ ಮಾಡುತ್ತಿದೆ, ರೆಮಿಡಿಸಿವರ್ ಅಂತಿಮ ಪರಿಹಾರವಲ್ಲ ರೆಮಿಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಹುಟ್ಟಿಸುವ ಕೆಲಸ ವಾಗುತ್ತಿದೆ ದೊಡ್ಡ ನಗರಗಳಲ್ಲಿ ಆಕ್ಸಿಜನ್ ಕೊರತೆಯಾಗಿದ್ದು ನಿಜ ಏರ್ ಲಿಪ್ಟಿಂಗ್, ರೈಲ್ವೆ ಮೂಲಕ ಆಕ್ಸಿಜನ್ ಪೂರೈಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಕರ್ನಾಟಕದ ವಿಚಾರದಲ್ಲೂ ಕೇಂದ್ರ ಮುತುವರ್ಜಿ ವಹಿಸಿದೆ ಎಂದು ತಿಳಿಸಿದರು.

ರಾಜ್ಯದ ಆರೋಗ್ಯ ಸಚಿವರು ಕೇಂದ್ರದ ಜೊತೆ ನಿರಂತರವಾದ ಸಂರ್ಪಕದಲ್ಲಿದ್ದಾರೆ, ಬಳ್ಳಾರಿಯಿಂದ ಪೂರೈಕೆಯಾಗುವ ಆಕ್ಸಿಜನ್ ಬಗ್ಗೆ ಮಾತುಕತೆ ನಡೆದಿದೆ . ಆಕ್ಸಿಜನ್ ಸಿಗುವುದಿಲ್ಲ ಎಂದು ಯಾರು ಭಯಪಡಬೇಡಿ ಇಂದಿನಿಂದ ಕೇಂದ್ರ ಸರ್ಕಾರ, ರಾಜ್ಯಕ್ಕೆ ಆಕ್ಸಿಜನ್ ಹಂಚಿಕೆ ಜಾಸ್ತಿಮಾಡಿದೆ ಹುಬ್ಬಳ್ಳಿ ಧಾರವಾಡದಲ್ಲಿಎರಡು ಚೈಲ್ಡ್ ಆಂಡ್ ಮದರ್ ಕೇರ್ ಆಸ್ಪತ್ರೆ ಸಿದ್ದವಾಗುತ್ತಿದೆ, ಮುಂದಿನ ತಿಂಗಳಿನಿಂದ ಜೂನವರೆಗೆ 80 ಕೋಟಿ ಕುಟುಂಬಗಳಿಗೆ ಎರಡು ತಿಂಗಳು ಪಡಿತರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.


Leave a Reply