Ballary

ಕುಡಿಯುವ ನೀರಿನ ಅಭಾವ!!ಸಿಂಗಾಪುರ್ ನಲ್ಲಿ ನೀರು ಖರೀದಿ ಮಾಡಬೇಕು.!!


ಬಳ್ಳಾರಿ : ನಗರಕ್ಕೆ ಕುಡಿಯುವ ನೀರಿನ ಕೊರತೆ ಸೃಷ್ಟಿ ಆಗಿದೆ,10,12,ದಿನಗಳಿಂದ  ಕೆಲ ವಾರ್ಡ್ ಗಳಿಗೆ ಕುಡಿಯುವ ಸರಬರಾಜು ಆಗಿಲ್ಲ.

ನಗರದ ತಾಳುರು ರಸ್ತೆಯ,ಭಗತ್ ಸಿಂಗ್ ನಗರ್,ಕನ್ನಡ ನಗರ ಪ್ರದೇಶಗಳಲ್ಲಿ ಜನರು ಖಾಸಿಗಿ ಟ್ಯಾಂಕರ್ ಗಳು ಮೂಲಕ ನೀರು ಖರೀದಿಸಿ ಕುಡಿಯಲು, ಬಳಕೆ ಮಾಡಲು ಸಿದ್ದ ವಾಗಿದ್ದಾರೆ.ಒಂದು ಟ್ಯಾಂಕರ್,(ಟ್ಯಾಕ್ಟರ್)600/-500/-ಇರುತ್ತದೆ. ಎರಡು- ಮೂರು ಮನೆಗಳವರು ಹೊಂದಾಣಿಕೆ ಮಾಡಿಕೊಂಡು ಖರೀದಿ ಮಾಡುತ್ತಾರೆ.

ಸಚಿವರು, ಶಾಸಕರುಗಳು ನಗರಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಲಿದ್ದಿವಿ. ನಗರ ಸಿಂಗಾಪುರ್ ಆಗಿದೆ ಅಂತಾರೆ .ನೋಡಿ ನಮ್ಮ ಸಿಂಗಾಪುರ್ ಕಥೆ ಅಂತಾರೆ ಜನರು ,ಇವರು ಮತ್ತೆ ಮತ ಕೇಳುತ್ತಾರೆ -ನಾವು ಮತ ಹಾಕಬೇಕು?  ಏನು ಮಾಡೋದು ನೊಡಿ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ .


Leave a Reply