Koppal

ಗಂಗಾವತಿ ಅಬಕಾರಿ ಇಲಾಖೆಯಲ್ಲಿ ಜೀಪ್ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿರುವ ಗಾಯತ್ರಿ


ಗಂಗಾವತಿ ;

ಅಬಕಾರಿ ಇಲಾಖೆ ಜೀಪ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಗಾಯತ್ರಿ ಎ. ಅವರು ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮ ಮಹಿಳೆ ಜೀಪ್ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿರುವ ಹೆಗ್ಗಳಿಕೆ ಇವರದಾಗಿದೆ
ಗಾಯತ್ರಿ ಅವರು ಮಾತನಾಡಿ ಯಾವುದೇ ಕೆಲಸವಾದರೇನು ಸರಕಾರದ ಕೆಲಸ ದೇವರ ಕೆಲಸ ಮಹಿಳೆಯರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸುವ ಮೂಲಕ ಮಹಿಳೆಯರಿಗೆ ವಿಶ್ವಾಸ ತುಂಬಿದ ಗಾಯತ್ರಿ ಅವರು
ನನ್ನ ವಿದ್ಯಾಭ್ಯಾಸ ಡಿ.ಎಡ್ ಮಾಡಿದ್ದೆ ವೃತ್ತಿಯಲ್ಲಿ ಶಿಕ್ಷಕಿ ಆಗಬೇಕು ಅಂತ ನನಗೆ ತುಂಬಾ ಆಸೆ ಇತ್ತು ಆದರೆ ನನಗೆ ಅಬಕಾರಿ ಇಲಾಖೆಯಲ್ಲಿ ಸರಕಾರಿ ನೌಕರಿ ಜೀಪ್ ಡ್ರೈವರ್ ಆಗಿ ಕೆಲಸ ಸಿಕ್ಕಿದೆ
ನನ್ನ ಇಲಾಖೆಯಲ್ಲಿ ತಾಲ್ಲೂಕು ಅಧಿಕಾರಿಗಳು ಹಾಗೂ ಕಾನ್ಸ್ ಟೆಬಲ್ಸ್ ಗಳು ಎಲ್ಲರೂ ನನಗೆ ಸ್ಫೂರ್ತಿ ಎಂದು ಮಾತನಾಡಿದರು
ಹನುಮೇಶ್ ಬಟಾರಿ


Leave a Reply