BelagaviState

ಎರಡನೇ ದಿನಕ್ಕೆ ಕಾಲಿಟ್ಟ ಲಾಕ್ ಡೌನ್, ಮಾರುಕಟ್ಟೆಯಲ್ಲಿ ನಿಲ್ಲದ ಜನಜಂಗುಳಿ


ಬೆಳಗಾವಿ: ಎರಡನೇ ದಿನದ ವೀಕೆಂಡ್ ಲಾಕ್ ಡೌನ್ ಪ್ರಾರಂಭವಾಗಿದ್ದು ಬೆಳಿಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಬೆಳಗಾವಿ ಮಾರುಕಟ್ಟೆಯಲ್ಲಿ ಜನ ಮುಗಿಬಿದ್ದಿದೆ.

ಕೊರೊನಾ ಕಟ್ಟಿಹಾಕಲು ರಾಜ್ಯಸರಕಾರ ಜಾರಿಗೊಳಿಸಿರುವ ವಿಕೆಂಡ್ ಲಾಕ್ಡೌನ್ ಶನಿವಾರ ಭಾಗಶಃ ಯಶಸ್ವಿಯಾಗಿದ್ದು ಎರಡನೆ ದಿನಕ್ಕೆ ಕಾಲಿಟ್ಟಿದೆ. ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು ಮಾರುಕಟ್ಟೆಯಲ್ಲಿ ಜನ ಖರೀದಿಗೆ ಮುಗಿಬಿದ್ದಿದ್ದಾರೆ.‌

ವೀಕೆಂಡ್ ಕರ್ಫೂ ವೇಳೆ ಯಾರಾದರೂ ಅನಗತ್ಯವಾಗಿ ರಸ್ತೆಗೆ ಇಳಿಯದೆ,  ಸರ್ಕಾರದ ಆದೇಶ ಪಾಲನೆ ಮಾಡಬೇಕು. ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಅಪ್ಪಿತಪ್ಪಿ ಅನಾವಶ್ಯಕ ಬೀದಿಗಿಳಿದ್ರೆ ಲಾಠಿ ಏಟು  ಬಿಳುವುದು ಫೀಕ್ಸ ಆಗಿದೆ.


Leave a Reply