NationalNew Delhi

ನಿಲ್ಲದ ಕೊರೊನಾ ಓಟ, ದೇಶದಲ್ಲಿ ಮತ್ತೆ ದಾಖಲೆಯತ್ತ ಸೋಂಕಿತರ ಸಂಖ್ಯೆ


ನವದೆಹಲಿ; ಭಾರತದಲ್ಲಿ 24 ಗಂಟೆಯಲ್ಲಿ ಕಂಡುಬಂದಿರು ಕೋವಿಡ್ ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸಿವೆ.  ಒಂದೇ ದಿನದಲ್ಲಿ 3,49,691 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು. 2,767 ಜನರು ಸಾವನ್ನಪ್ಪಿದ್ದಾರೆ ಇನ್ನೂ 2,17,113 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಇಂದಿನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಭಾರತದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,69,60,172ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 26,82,751 ಇದೆ.

ಇನರನೂ ರಾಜ್ಯವಾರು ಕೋವಿಡ್ ಪ್ರಕರಣಗಳನ್ನು ನೋಡುವುದಾದರೆ ಮಹಾರಾಷ್ಟ್ರದಲ್ಲಿ 67,160 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 42,28,836.

ಕೇರಳದಲ್ಲಿ 26,685 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13,77,187ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 1,98,572.

ಕರ್ನಾಟಕದಲ್ಲಿ 29,438 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 13,04,397ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.34,483.

 


Leave a Reply