BelagaviState

ಗುಣಮಟ್ಟದ ಪರೀಕ್ಷೆ, ಸಮರ್ಪಕಚಿಕಿತ್ಸೆಗೆ ನಿರ್ಧಾರ: ಪ್ರಾದೇಶಿಕ ಆಯುಕ್ತಆಮ್ಲಾನ್ ಬಿಸ್ವಾಸ್‌


ಬೆಳಗಾವಿ: ಕೋವಿಡ್ ಸೋಂಕಿಗೆ ಸಂಬAಧಿಸಿದAತೆ ಸಂಗ್ರಹಿತ ಮಾದರಿಗಳ ತ್ವರಿತ ಮತ್ತುಗುಣಮಟ್ಟದ ಪರೀಕ್ಷೆ; ಸೋಂಕಿನ ಲಕ್ಷಣ ಹೊಂದಿದವರು ಮತ್ತು ಸೋಂಕಿತರ ಸಂಪರ್ಕಿತರ ಪತ್ತೆಗೆ ಪರಿಣಾಮಕಾರಿ ವಿಧಾನ ಅಳವಡಿಕೆ; ಸಕಾಲಕ್ಕೆ ಸಮರ್ಪಕಚಿಕಿತ್ಸೆಒದಗಿಸುವುದು ಮತ್ತು ಸಾರ್ವಜನಿಕರದೂರು ನಿರ್ವಹಣೆ ಸೇರಿದಂತೆಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಪ್ರಾದೇಶಿಕ ಆಯುಕ್ತರಾದಆಮ್ಲಾನ್‌ಆದಿತ್ಯ ಬಿಸ್ವಾಸ್‌ಅವರಅಧ್ಯಕ್ಷತೆಯಲ್ಲಿಜಿಲ್ಲಾಧಿಕಾರಿಕಚೇರಿಯ ಸಭಾಂಗಣದಲ್ಲಿ ಶನಿವಾರ (ಏ.೨೪) ಸಂಜೆ ಸುಮಾರುಆರು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿಕೋವಿಡ್ ನಿಯಂತ್ರಣ ಮತ್ತು ಸಮರ್ಪಕಚಿಕಿತ್ಸೆಯ ಮಾರ್ಗೋಪಾಯಗಳ ಕುರಿತುಚರ್ಚೆ ನಡೆಸಲಾಯಿತು.

ಬಿಮ್ಸ್ ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯಗಳಲ್ಲಿ ನಿರಂತರವಾಗಿಗAಟಲುದ್ರವದ ಮಾದರಿಯನ್ನು ಪರೀಕ್ಷಿಸುತ್ತಿದ್ದು, ಇಂತಹ ಸಂದರ್ಭದಲ್ಲಿತ್ವರಿತವಾಗಿ ಹಾಗೂ ಗುಣಮಟ್ಟದ ಪರೀಕ್ಷೆಯ ಬಗ್ಗೆಯೂಆದ್ಯತೆ ನೀಡುವಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತಆಮ್ಲಾನ್‌ಆದಿತ್ಯ ಬಿಸ್ವಾಸ್ ತಿಳಿಸಿದರು.

ಸೋಂಕಿತರ ಸಂಪರ್ಕಿತರನ್ನುತಕ್ಷಣವೇ ಗುರುತಿಸಿ ಅವರ ಮಾದರಿಯನ್ನು ಸಂಗ್ರಹಿಸುವುದಲ್ಲದೇಅದನ್ನುತ್ವರಿತವಾಗಿ ಪರೀಕ್ಷಿಸಿ ವರದಿ ನೀಡಬೇಕು. ಅದೇರೀತಿ ಬೇರೆಕಡೆಯಿಂದ ಬಂದುಜಿಲ್ಲೆಯಲ್ಲಿತಾತ್ಕಾಲಿಕವಾಗಿ ವಾಸ ಮಾಡುತ್ತಿರುವವರನ್ನುಕೂಡ ಪರೀಕ್ಷಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಖಾಸಗಿ ಆಸ್ಪತ್ರೆಗಳ ಬೆಡ್ ಹಂಚಿಕೆಗೆ ತAತ್ರಾAಶ:

ಕೋವಿಡ್-೧೯ ಸೋಂಕಿತರಚಿಕಿತ್ಸೆಗೆ ಅನುಕೂಲವಾಗುವಂತೆಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್ ಹಾಗೂ ವೈದ್ಯಕೀಯ ಸೌಲಭ್ಯಗಳ ಮಾಹಿತಿಯನ್ನು ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರಅಲ್ಲಿನ ಬೆಡ್ ಗಳನ್ನು ಬಳಸಿಕೊಳ್ಳುವ ಕುರಿತುಚರ್ಚೆ ನಡೆಸಲಾಯಿತು.

ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆಒದಗಿಸಲು ಅನುಕೂಲವಾಗುವಂತೆಜಿಲ್ಲೆಯಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿರುವ ಬೆಡ್(ಹಾಸಿಗೆ)ಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಪ್ರತ್ಯೇಕತಂತ್ರಾAಶದಲ್ಲಿ ಅಳವಡಿಸಿ ಸೋಂಕಿತರಅಗತ್ಯಕ್ಕೆಅನುಸಾರವಾಗಿ ಬೆಡ್ ಮಂಜೂರು ಮಾಡಬೇಕು.

ಈ ರೀತಿ ಬೆಡ್ ಹಂಚಿಕೆಯನ್ನು ಪಾರದರ್ಶಕವಾಗಿ ನಿರ್ವಹಿಸಲು ಜಿಲ್ಲಾ ಪಂಚಾಯತ ಸಿಇಓ ನೇತೃತ್ವದಲ್ಲಿ ಸಮಿತಿಯನ್ನುರಚಿಸಲು ಸಭೆಯಲ್ಲಿತೀರ್ಮಾನಿಸಲಾಯಿತು.

ಜಿಲ್ಲೆಯ ಗಡಿಯಲ್ಲಿ ತೀವ್ರ ನಿಗಾ:

ಕಾಲಕಾಲಕ್ಕೆ ಸರಕಾರ ಪ್ರಕಟಿಸುವ ಮಾರ್ಗಸೂಚಿಯ ಪ್ರಕಾರಗಡಿಯಲ್ಲಿತೀವ್ರ ನಿಗಾ ವಹಿಸಬೇಕು. ಗಡಿಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ಮತ್ತುತಪಾಸಣಾ ಪ್ರಕ್ರಿಯೆಗಳ ಮೇಲೆ ಹಿರಿಯ ಅಧಿಕಾರಿಗಳು ನಿಗಾವಹಿಸಲು ಅನುಕೂಲವಾಗುವಂತೆಗಡಿಚೆಕ್ ಪೋಸ್ಟ್ ಗಳಲ್ಲಿ ವೆಬ್‌ಕ್ಯಾಮೆರಾ ಅಳವಡಿಸಿ ತಂತ್ರಾAಶದ ಮೂಲಕ  ಪರಿಶೀಲಿಸಲು ಪ್ರಾದೇಶಿಕ ಆಯುಕ್ತಆಮ್ಲಾನ್ ಬಿಸ್ವಾಸ್ ತಿಳಿಸಿದರು.

ಇದೇರೀತಿಕ್ಯಾಬ್(ಕೋವಿಡ್‌ಅಪ್ರೋಪ್ರಿಯೇಟ್ ಬಿಹೇವಿಯರ್) ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್‌ಇಲಾಖೆಯ ವತಿಯಿಂದಇನ್ನಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ ಸರಕಾರದ ಮಾರ್ಗಸೂಚಿಯನ್ನುಯಥಾವತ್ತಾಗಿ ಜಾರಿಗೊಳಿಸಲು ಸಭೆಯಲ್ಲಿ ತಿಳಿಸಲಾಯಿತು.

ಬಿಮ್ಸ್ ಗೆ ಅಪರಜಿಲ್ಲಾಧಿಕಾರಿ ನೋಡಲ್‌ ಅಧಿಕಾರಿ:

ಕೋವಿಡ್-೧೯ ಆಸ್ಪತ್ರೆಯಾಗಿರುವ ಬಿಮ್ಸ್ ನಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆಒದಗಿಸಲು ಹಾಗೂ ವೈದ್ಯರು ಮತ್ತು ಸಿಬ್ಬಂದಿ ಪಾಳಿ ಪ್ರಕಾರ ಸರಿಯಾಗಿಕಾರ್ಯನಿರ್ವಹಿಸುವ ಕುರಿತು ಮೇಲ್ವಿಚಾರಣೆಗೆ ಜಿಲ್ಲಾಡಳಿತದ ವತಿಯಿಂದಅಪರ ಜಿಲ್ಲಾಧಿಕಾರಿಗಳನ್ನು ನೋಡಲ್‌ಅಧಿಕಾರಿಯಾಗಿ ನಿಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಚಿಕಿತ್ಸೆ ಸೇರಿದಂತೆ ಕೋವಿಡ್-೧೯ ಗೆ ಸಂಬAಧಿಸಿದAತೆ ಯಾವುದೇರೀತಿಯಕರ್ತವ್ಯದಲ್ಲಿ ನಿರ್ಲಕ್ಷ್ಯತೋರಿಸುವ ಅಧಿಕಾರಿಗಳ ವಿರುದ್ಧಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಕೋವಿಡ್-೧೯ ಪರೀಕ್ಷೆ, ಚಿಕಿತ್ಸೆಗೆಅಗತ್ಯವಿರುವ ಹಣಕಾಸು ಸೇರಿದಂತೆಎಲ್ಲರೀತಿಯ ನೆರವನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುವುದುಎಂದುಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ಅವರು ತಿಳಿಸಿದರು.

ಆದ್ದರಿಂದಕೋವಿಡ್ ಪರೀಕ್ಷೆ, ಚಿಕಿತ್ಸೆಗೆ ಸಂಬAಧಿಸಿದAತೆ ಏನೇ ಅನಾನುಕೂಲತೆ, ಸಿಬ್ಬಂದಿ ಕೊರತೆ, ಅನುದಾನಕೊರತೆಅಥವಾ ತೊಂದರೆಗಳ ನೆಪ ಹೇಳಬಾರದು. ಒಂದು ವೇಳೆ ಸಮಸ್ಯೆಗಳಿದ್ದರೆ ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕುಎಂದು ಹೇಳಿದರು.

ಬಿಮ್ಸ್ ಹಾಗೂ ಐಸಿಎಂಆರ್-ಎನ್.ಐ.ಟಿ.ಎA ಪ್ರಯೋಗಾಲಯಗಳು ಕೂಡಕೋವಿಡ್ ಮಾದರಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ನಿಗದಿತ ಸಮಯದಲ್ಲಿ ವರದಿ ನೀಡಬೇಕುಎಂದು ಸೂಚಿಸಲಾಯಿತು.

ಜಿಲ್ಲಾ ಹಾಗೂ ತಾಲ್ಲೂಕುಕಂಟ್ರೋಲ್ ರೂಮ್‌ಗಳು ಸಮನ್ವಯತೆಯೊಂದಿಗೆ ಸಾರ್ವಜನಿಕರ ಅನುಕೂಲಕ್ಕೆ ಕೆಲಸ ಮಾಡಬೇಕು

ಆಕ್ಸಿಜನ್ – ಔಷಧ ಲಭ್ಯತೆ; ಮುಂಜಾಗ್ರತೆಗೆ ನಿರ್ದೇಶನ:

ಆಕ್ಸಿಜನ್-ಔಷಧದಾಸ್ತಾನು ಮತ್ತು ಲಭ್ಯತೆಗೆಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಹಾಯಕಔಷಧ ನಿಯಂತ್ರಕರಜವಾಬ್ದಾರಿಯಾಗಿದೆ. ಆದ್ದರಿಂದಆಕ್ಸಿಜನ್ ಮತ್ತುಅಗತ್ಯಔಷಧ ಸಾಮಗ್ರಿಗಳ ಲಭ್ಯತೆಕುರಿತುಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸರ್ಕಾರದ ಹಂತದಲ್ಲಿಏನಾದರೂ ನೆರವು ಬೇಕಾದರೆಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕುಎಂದು ಸಭೆಯಲ್ಲಿ ತಿಳಿಸಲಾಯಿತು.

ಕೋವಿಡ್-೧೯ ನಿಯಂತ್ರಣಕುರಿತುಜಿಲ್ಲೆಯಲ್ಲಿಇದುವರೆಗೆಕೈಗೊAಡ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಪರಾಮರ್ಶಿಸಲಾಯಿತು.

ಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ಕುಮಾರ್, ಪೊಲೀಸ್‌ಆಯುಕ್ತರಾದಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕಅಧಿಕಾರಿಡಾ.ದರ್ಶನ್‌ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಅವರುಇದುವರೆಗೆಕೈಗೊAಡ ಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಐಸಿಎಂಆರ್-ಎನ್.ಐ.ಟಿ.ಎA. ನಿರ್ದೇಶಕರಾದಡಾ.ಚಟ್ಟೋಪಾಧ್ಯಾಯಅವರು ಕೋವಿಡ್-೧೯ ವೈರಸ್ ಗುಣಲಕ್ಷಣಗಳು ಮತ್ತು ಸೋಂಕು ಹರಡುವಿಕೆತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳನ್ನು ವಿವರಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯಆಯುಕ್ತರಾದಜಗದೀಶ್‌ಕೆ.ಎಚ್., ಉಪ ವಿಭಾಗಾಧಿಕಾರಿಗಳಾದ ಅಶೋಕ ತೇಲಿ, ಶಶಿಧರ್ ಬಗಲಿ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿಡಾ.ಬಾಲಕೃಷ್ಣತುಕ್ಕಾರ, ಆರ್.ಸಿ.ಎಚ್. ಡಾ.ಐ.ಪಿ.ಗಡಾದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಉಪ ನಿರ್ದೇಶಕಗುರುನಾಥಕಡಬೂರ, ಸಹಾಯಕಔಷಧ ನಿಯಂತ್ರಕರಘುರಾಮ್, ಡಾ.ಎಂ.ಎಸ್.ಪಲ್ಲೇದ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


Leave a Reply