BelagaviState

ಕೋವಿಡ್-19 ರೋಗಿಗಳ ಚಿಕಿತ್ಸೆ: ಖಾಸಗಿ ಆಸ್ಪತ್ರೆಗಳ ನೋಂದಾವಣಿಗೆ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಮನವಿ


ಬೆಳಗಾವಿ: ಕೋವಿಡ್ ಸಾಂಕ್ರಾಮಿಕರೋಗ ದಿನ ದಿನಕ್ಕೂ ಉಲ್ಬಣಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆಒದಗಿಸುವಉದ್ಧೇಶದಿಂದ ಈ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿರುವಎಲ್ಲ ಖಾಸಗಿ ಆಸ್ಪತ್ರೆಗಳು ಸುವರ್ಣಆರೋಗ್ಯ ಸುರಕ್ಷಾಟ್ರಸ್ಟ್ ನೊಂದಿಗೆ ನೋಂದಾವಣೆ ಮಾಡಿಕೊಳ್ಳಬೇಕು ಎಂದುಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ಅವರುಎಲ್ಲ ಖಾಸಗಿ ಆಸ್ಪತ್ರೆಗಳಿಗೆ ವಿನಂತಿಸಿ ಕೊಂಡಿದ್ದಾರೆ.

ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಜೊತೆಗೂಡಿ ಈ ಸಾಂಕ್ರಾಮಿಕರೋಗದ ವಿರುದ್ದ ಹೋರಾಡಬೇಕಾಗಿದೆ ಹಾಗೂ ಕೋವಿಡ್-19 ನಿಂದ ಬಳಲುತ್ತಿರುವ ರೋಗಿಗಳಿಗೆಅಗತ್ಯಚಿಕಿತ್ಸೆಒದಗಿಸುವುದುಅತ್ಯಂತಅವಶ್ಯಕವಾಗಿದೆ. ಆದ್ದರಿಂದಎಲ್ಲ ಖಾಸಗಿ ಆಸ್ಪತ್ರೆಗಳು ಸುವರ್ಣಆರೋಗ್ಯ ಸುರಕ್ಷಾಟ್ರಸ್ಟ್ ನೊಂದಿಗೆ ನೋಂದಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನೋಂದಣಿ ಪ್ರಕ್ರಿಯೆ:

ಖಾಸಗಿ ಆಸ್ಪತ್ರೆಗಳ ನೋಂದಾವಣೆ ಪ್ರಕ್ರಿಯೆಯುಅತ್ಯಂತ ಸರಳ ಸುಲಭವಾಗಿದ್ದು https://sast.karnataka.gov.in ವೆಬ್‌ಸೈಟ್ ಮೂಲಕ ಖಾಸಗಿ ಆಸ್ಪತ್ರೆಗಳು ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.

https://sast.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ New empanelment request ಅನ್ನು ಕ್ಲಿಕ್ ಮಾಡುವುದು. ಇದರ ನಂತರ empanelment request ನಲ್ಲಿಕೋರಲಾದ ಆಸ್ಪತ್ರೆಯ ವಿವರಗಳನ್ನು ಭರ್ತಿ ಮಾಡಿ, ಅವಶ್ಯಕ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸುವುದು. ನಂತರದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸದರಿ empanelment  ಕೋರಿಕೆಯನ್ನು ಪರಿಶೀಲಿಸಿ ಆನ್‌ಲೈನ್ ಮೂಲಕವೇ ಅನುಮೋದನೆ ನೀಡುತ್ತದೆ.

ಆದ್ದರಿಂದ ದಯಮಾಡಿ ಎಲ್ಲ ಖಾಸಗಿ ಆಸ್ಪತ್ರೆಗಳು ನೋಂದಾವಣೆ ಮಾಡಿಕೊಳ್ಳುವ ಮೂಲಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗುವಂತೆ ಈ ಮೂಲಕ ಕೋರಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್ http://arogya.karnataka.gov.in/sast/ ಭೇಟಿ ನೀಡಿ ಮತ್ತುಟೋಲ್ ಫ್ರೀ ಸಂಖ್ಯೆ: 1800 425 8330 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply