BengaluruState

ರಾಜ್ಯದಲ್ಲಿ ಇನ್ನೂ 40ದಿನ ನಡೆಯಲಿದೆ ಕೋವಿಡ್ ರಾಜ್ಯಭಾರ


ಬೆಂಗಳೂರು: ಕೊರೊಣಾ ರಣಕೇಕೆಗೆ ಇಡೀ ರಾಜ್ಯವೇ ತತ್ತರಿಸುತ್ತಿದೆ ಇದರ ಬೆನ್ನಲ್ಲೆ ತಜ್ಞರು ಮತ್ತೊಂದು ಶಾಕ್ ನೀಡಿದ್ದು ಕೋವಿಡ್ ಎರಡನೇ ಅಲೆ ಇನ್ನು 40 ದಿನಗಳ ಕಾಲ ರಾಜ್ಯದಲ್ಲಿ ತಾಂಡವವಾಡಲಿದೆ ಎಂದು ತಿಳಿಸಿದ್ದಾರೆ ಎಂದು  ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೆಳಿದ್ದಾರೆ.

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಇನ್ನೂ 40 ದಿನ ಇರಲಿದೆ ಎಂದು ತಜ್ಞರು ಹೇಳಿದ್ದಾರೆ ಅಲ್ಲಿಯವರೆಗೂ ಕೊರೊನಾ ನಿಯಮ ಪಾಲಿಸುವುದರ ಜೊತೆಗೆ ಮನೆಯಲ್ಲೇ ಇರೋದು ಸೂಕ್ತ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಜನ ಸೋಂಕಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಕೊರೊನಾ ರೋಗದ ಲಕ್ಷಣ ಇಲ್ಲದಿದ್ರೂ ಪಾಸಿಟಿವ್ ಪ್ರಕರಣಗಳು ಬರುತ್ತಿದ್ದು  ಆಸ್ಪತ್ರೆಗೆ ಬರುವ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆ ಆಗ್ತಿದೆ. ರೋಗಲಕ್ಷಣದ ಇಲ್ಲದ ಸೋಂಕಿತರು ಮನೆಯಲ್ಲೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.


Leave a Reply