BelagaviState

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗುಣಮುಖ ಆಸ್ಪತ್ರೆಯಿಂದ ಡಿಸ್ಚಾರ್ಜ್


ಬೆಳಗಾವಿ: ಕೋವಿಡ್ ದೃಡಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಗರದ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀ ಬೆಬ್ಬಾಳಕರ ಇಂದು ಡಿಸ್ಚಾರ್ಜ್ ಆಗಿದ್ದು ಕೋವಿಡ್ ಎರಡನೇ ಅಲೆಯನ್ನು ಗೆದ್ದು ಬಂದಿದ್ದಾರೆ. ಮೇ 15 ರಂದು ಕೊರೊನಾ ಸೋಂಕು ಕಾಣಿಕೊಂಡಿದರಿಂದ ಲಕ್ಷ್ಮಿ ಹೆಬ್ಬಾಳಕ್ ಮತ್ತು ಕುಟುಂಬ  ಆರಂಭದಲ್ಲಿ ಹೋಮ್ ಐಸೋಲೇಷನನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಕೆಲವು ದಿನಗಳ ಹಿಂದೆ ರೋಗದ ಗುಣಲಕ್ಷಣ ಉಲ್ಬಣಗೊಂಡಿದದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.‌ ಆರು ದಿನಗಳ ಬಳಿಕ ಲಕ್ಷ್ಮೀ ಹೆಬ್ಬಾಳಕರ ಕುಟುಂಬ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದೆ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಜನತಾ ಕರ್ಫ್ಯೂ ಮಾಡಿದ್ರೆ ನಮ್ಮ ಜನರಿಗೆ ತಿಳುವಳಿಕೆ ಬರುತ್ತಿಲ್ಲ. ಜನರಿಗೆ ತಿಳುವಳಿಕೆ ಬರಬೇಕಂದ್ರೆ ಲಾಕ್‌ಡೌನ್ ಒಂದೇ ಪರಿಹಾರ. ಕೊರೊನಾ ನಿಯಂತ್ರಣಕ್ಕೆ ಒಂದು ವಾರ ಇಲ್ಲವೇ 10 ದಿನ ಲಾಕ್‌ಡೌನ್ ಮಾಡಿದ್ರೆ ಸೂಕ್ತವಾಗಿರುತ್ತದೆ. ಸಿಎಂ ಹಾಗೂ ಸರ್ಕಾರಕ್ಕೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ರು,

ನಮ್ಮ ಕುಟುಂಬದ 18 ಜನರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಬಹಳ ಜನರು ನೆಗ್ಲಿಜೆನ್ಸಿ ಮಾಡಿದ್ವಿ. ವೈದ್ಯರು ತಮ್ಮ ಜೀವದ ಹಂಗು ತೊರೆದು ನಮಗೆ ಸಹಾಯ ಮಾಡ್ತಿದ್ದಾರೆ ಎಂದು ಹೆಳಿದ ಅವರು ವೈದ್ಯರಿಗೆ ಕೃತಜ್ಞತೆ ತಿಳಿಸಿದರು.

 

 


Leave a Reply