Belagavi

ಹಲಸಿ ಗ್ರಾಮ ಪಂಚಾಯತಿಯಲ್ಲಿ ಕೊರೋನಾ ಎರಡನೇ ಅಲೆ ಮುಂಜಾಗ್ರತಾ ಕ್ರಮಕ್ಕೆ ಸಭೆ


ಹಲಸಿ : ಕೊರೋನಾ ಎರಡನೇ ಅಲೆಯು ಮತ್ತೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಖಾನಾಪೂರ ತಾಲೂಕಿನ ಹಲಸಿ ಗ್ರಾಮದಲ್ಲಿ ಮಹಾಮಾರಿ ರೋಗವು ಹರಡುವುದನ್ನು ನಿಲ್ಲಿಸಲು ಜನರಲ್ಲಿ ತಿಳುವಳಿಕೆ ಮೂಡುವಂತಹ ವಿಷಯಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಪಿ.ಡಿ ಓ, ಸದಸ್ಯರು ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಕಮೀಟಿಯೊಂದಿಗೆ ಚರ್ಚಿಸಲಾಯಿತು.

ಹಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಡಿ ವಾಸಿಸುವ ಎಲ್ಲ ಮನೆಗಳಿಗೆ ಆಯಾ ವಾರ್ಡ್ ಸದಸ್ಯರು ತೆರಳಿ
ಕರೋನಾ ವೈರಸ್ ಬಗ್ಗೆ ತಿಳುವಳಿಕೆ ಮೂಡಿಸಬೇಕು ಮನೆ ಮನೆಗೆ ತೆರಳಿ ಕೊರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು, ಗ್ರಾಮಸ್ಥರಿಗೆ ಯಾವುದೇ ಅವಶ್ಯ ವಸ್ತುಗಳ ಅಗತ್ಯವಿದ್ದಲ್ಲಿ ಅವುಗಳನ್ನು ಪೂರೈಸುವುದು ಹಾಗೂ ಜನರಲ್ಲಿ ಅಂತರ ಕಾಪಾಡಿಕೊಳ್ಳಲು ತಿಳುವಳಿಕೆ ನೀಡಬೇಕೆಂದು ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಸಂತೋಷ ಹಂಜಿ ಮಾತನಾಡಿದರು


Leave a Reply