Belagavi

ಕೊರೊನಾ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ


ಹಿಡಕಲ್ ಡ್ಯಾಮ್: ಮಹಾಮಾರಿ ಕೊರೊನಾ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಹೊರದೊಡಿಸಲು ಟಾಸ್ಕ ಪೊರ್ಸ ಸಮೀತಿ ಸದಸ್ಯರು ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಶ್ರಮಿಸಬೇಕೆಂದು ಹೊಸಪೇಟ ಗ್ರಾಪಂ ಪಿಡಿಒ ಎಂ ಬಿ ಪೂಜೇರಿ ಹೇಳಿದರು. ಅವರು ಸೋಮವಾರ ದಿ. ೨೬ ರಂದು ಹುಕ್ಕೇರಿ ತಾಲೂಕಿನ ಹೊಸಪೇಟ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಟಾಸ್ಕ ಪೊರ್ಸ ಸಮೀತಿ ರಚನೆ ಸಂದರ್ಭದಲ್ಲಿ ಮಾತನಾಡಿದರು. ಈ ಟಾಸ್ಕ ಪೊರ್ಸ ಸಮೀತಿ ಅಧ್ಯಕ್ಷರಾಗಿ ರೇಣುಕಾ ಬೂದಿಹಾಳ, ಉಪಾಧ್ಯರಾಗಿ ಮಹಾನಿಂಗ ಮರೆನ್ನವರ ಇವರನ್ನು ಮತ್ತು ಇನ್ನೂಳಿದ ಗ್ರಾಮ ಪಂಚಾಯತಿ ಸದಸ್ಯರನ್ನು ಸಮೀತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ನೀರಾವರಿ ನಿಗಮದ ಸಕಾನಿ ಅಭಿಯಂತ ಅರವಿಂದ ಜಮಖಂಡಿ ಅವರು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲ ವಾರ್ಡಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಬೀಸಿ ನೀರು ಕುಡಿಯಬೇಕು ಮತ್ತು ಕೊರೊನಾದ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳನ್ನು ಗುರ್ತಿಸಬೇಕು. ಈಗಾಗಲೆ ಸಚಿವ ಉಮೇಶ ಕತ್ತಿಯವರಿಗೆ ಹಿಡಕಲ್ ಡ್ಯಾಮಿನ ಆಸ್ಪತ್ರೆಯಲ್ಲಿ ಕೋವಿಡ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸಬೇಕೆಂದು ವಿನಂತಿಸಲಾಗಿದೆ ಇದಕ್ಕೆ ವೈದ್ಯಾಧಿಕಾರಿಗಳು ಕೂಡ ಸಮ್ಮತಿಸಿದ್ದಾರೆ ಎಂದು ಎಂ ಬಿ ಪೂಜೇರಿ ಹೇಳಿದರು. ಸಭೆಯಲ್ಲಿ ಗ್ರಾಪಂ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತ ಸಿಬ್ಬಂದಿಯವರು ಉಪಸ್ಥಿತರಿದ್ದರು.


Leave a Reply