State

ಕೊರೊನಾ ಕಟ್ಟಿಹಾಕಲು ಮನೆಮದ್ದೇ ಸಂಜೀವಿನಿ: ಆರೋಗ್ಯ ಪಾಠ ಮಾಡಿದ ವಿಜಯ ಸಂಕೇಶ್ವರ


ಹುಬ್ಬಳ್ಳಿ : ಮಹಾಮಾರಿ ಕೊರೋನಾದಿಂದ ಸಾಕಷ್ಟು ಜನ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಈ ಹಿನ್ನೆಲೆ ವೈದ್ಯಕೀಯ ಚಿಕಿತ್ಸೆ ಜೊತೆಗೆ ಮನೆ ಮದ್ದು ಬಳಸಿದರೆ ಕೊರೋನಾ ನಿಯಂತ್ರಿಸಬಹುದು ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ತಿಳಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ಕೊರೊನಾ ಮಹಾಮಾರಿ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ರೋಗಿಗಳಿಗೆ ಉಸಿರಾಟದ ತೊಂದರೆ ಆಗಿ ಸಾವನಪ್ಪುತ್ತಿದ್ದಾರೆ. ಇದಲ್ಲದೆ ದೇಶದಲ್ಲಿ ಆಮ್ಲಜನಕಕ್ಕೆ ಬಾರಿ ಬೇಡಿಕೆ ಬಂದಿದ್ದು ಆದ್ರೆ ಕೆಲವೊಂದಿಷ್ಟು ಜನಕ್ಕೆ ಈ ಆಮ್ಲಜನಕ ಸಿಗುತ್ತಿಲ್ಲ ಹೀಗಾಗಿ ಈ ರೀತಿಯಾಗಿ ಆಮ್ಲಜನಕ ಸಿಗದೇ ಉಸಿರಾಟದ ತೊಂದರೆ ಇದ್ದವರು ಈ ಲಿಂಬೆ ಹಣ್ಣಿನ ರಸವನ್ನು ಹಾಕುವುದರಿಂದ ಅವರಿಗೆ ಅರ್ಧ ಗಂಟೆಯಲ್ಲಿ ಆರೋಗ್ಯ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಇನ್ನೂ ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿಯಂತ್ರಣವಾಗುತ್ತದೆ. ಇದನ್ನು ಸ್ವತಃ ನಾನು ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿದ್ದೇನೆ. ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಕರೊನಾ ಪಾಸಿಟಿವ್ ಆಗಿರುವವರು ಇದನ್ನು ಪ್ರಯೋಗಿಸಿ ಪರಿಣಾಮ ಕಂಡುಕೊಂಡಿದ್ದಾರೆ. ಮೂಗಿನಲ್ಲಿ ಲಿಂಬೆರಸ ಹಾಕುವುದರಿಂದ ಲಂಗ್ಸ್ ನಲ್ಲಿರುವ ಕಫ ಹೊರ ಬರುತ್ತದೆ. ಆಕ್ಸಿಜನ್ ಲೆವೆಲ್ ಹೆಚ್ಚಾಗಿ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.

ಎಲ್ಲರೂ ಬಿಸಿ ನೀರು ಸೇವಿಸಬೇಕು. ನಿತ್ಯ ಬಿಸಿ ನೀರಿನ ಹಬೆ (ಸ್ಟೀಮ್) ತೆಗೆದುಕೊಳ್ಳಬೇಕು. ಯಾವಾಗಲೂ ಮಾಸ್ಕ್ ಹಾಕುವುದರಿಂದ ಆಮ್ಲಜನಕ ಸರಿಯಾಗಿ ಸರಬರಾಜು ಆಗುವುದಿಲ್ಲ. ಹಾಗಾಗಿ, ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸಬೇಕು. ಒಬ್ಬರೇ ಇದ್ದಾಗ ಮಾಸ್ಕ್ ಬಳಸಬಾರದು. ಜನರ ಮಧ್ಯೆ ಇದ್ದಾಗ ಮಾತ್ರ ಬಳಸಬೇಕು ಎಂದು ತಿಳಿಸಿದರು.

ಡಾ. ಬಿ.ಎಂ. ಹೆಗಡೆ ಅವರು ಹೇಳುವ ಪ್ರಕಾರ, ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಬೇಕು. ಮೂಗಿನಲ್ಲಿ ಕೊಬ್ಬರಿ ಎಣ್ಣೆ ಹಾಕಿದರೆ‌ ಕರೊನಾ ಮಾತ್ರವಲ್ಲ ಯಾವುದೇ ವೈರಸ್ ತಗುಲುವುದಿಲ್ಲ. ನಾನು ನಮ್ಮ ಮನೆಯವರು ನಿತ್ಯ ಮೂರು ಬಾರಿ ಸ್ಟೀಂ ತೆಗೆದುಕೊಳ್ಳುತ್ತೇವೆ. ನಾನು ನ್ಯಾಚುರೋಪತಿಗೆ ಹೆಚ್ಚು ಒತ್ತು ಕೊಡುತ್ತೇನೆ. 71 ವರ್ಷದ ನಾನು ದೇಶಾದ್ಯಂತ ಓಡಾಡುತ್ತಿರುತ್ತೇನೆ. ನಿತ್ಯ 10ರಿಂದ 500 ಜನರನ್ನು ಭೇಟಿ ಮಾಡುತ್ತಿರುತ್ತೇನೆ. ಆದರೂ ಸೋಂಕು ತಗುಲಿಲ್ಲ. ಕಾರಣ ಮನೆ‌ಮದ್ದುಗಳನ್ನು ಬಳಸುತ್ತೇನೆ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

ಪ್ರಧಾನಿ ನೇತೃತ್ವದಲ್ಲಿ ಉತ್ತಮ ಕೆಲಸ:

ಪ್ರಧಾನಿ‌ ನರೇಂದ್ರ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಕೋವಿಡ್ ವಿರುದ್ಧ ಉತ್ತಮ ಕೆಲ‌ಸ ಮಾಡುತ್ತಿದ್ದಾರೆ. ಕೋವಿಡ್ ವಾರಿಯರ್ಸ್‌ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲೋ ಸಣ್ಣ ಪುಟ್ಟ ಘಟನೆಗಳು ನಡೆದಿರುತ್ತವೆ.‌ ಪ್ರಧಾನಿ ಉತ್ತಮ‌ ಫಾರ್ಮಾ ಕಂಪನಿಗಳಿಂದ ಲಸಿಕೆ‌ ಸಿಗುವಂತೆ ಮಾಡಿದ್ದಾರೆ. ಅನೇಕ‌ ದೇಶಗಳಿಗೂ ಲಸಿಕೆ‌ ರವಾನಿಸಿದ್ದಾರೆ. 130 ಕೋಟಿ ಜನರಿಗೆ ಲಸಿಕೆ ನೀಡುವುದು ಸವಾಲಿನ ಕೆಲಸ. ಆದರೂ ನಮ್ಮವರು ಉತ್ತಮ ಕೆಲಸ‌ ಮಾಡುತ್ತಿದ್ದಾರೆ ಎಂದು ಡಾ.ವಿಜಯ ಸಂಕೇಶ್ವರ ತಿಳಿಸಿದರು.

ಕೊರೋನಾದಿಂದ ಉದ್ಯಮಕ್ಕೆ ಹೊಡೆತ:

ಕರೊನಾದಿಂದ ಸಾರಿಗೆ ಉದ್ಯಮಕ್ಕೆ ಸಮಸ್ಯೆ ಯಾಗಿದೆ. ನಾನು ವಿ ಆರ್ ಎಲ್ ಬಗ್ಗೆ ಮಾತ್ರ ಹೇಳುತ್ತಿಲ್ಲ. ಬಹುತೇಕ ಎಲ್ಲ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಸರ್ಕಾರ ಕಳೆದ ಬಾರಿ ಹೆಚ್ಚುವರಿಯಾಗಿ ರೇಶನ್ ನೀಡಿದ‌ ಸಂದರ್ಭ ಹಲವರು ಕೆಲಸಕ್ಕೇ ಬರಲಿಲ್ಲ. ಇದರಿಂದ ದೇಶದ‌ ಉತ್ಪಾದನೆಗೆ ಹೊಡೆತ ಬೀಳುತ್ತದೆ. ಸವಲತ್ತುಗಳಿಂದ ಜನ ಹಾಳಾಗುತ್ತಿದ್ದಾರೆ. ಹಲವು ಉದ್ಯೋಗಾವಕಾಶಗಳು ಇದ್ದರೂ ಜನ ಮುಂದೆ ಬರುತ್ತಿಲ್ಲ ಎಂದು ಡಾ.ಸಂಕೇಶ್ವರ ಬೇಸರ ವ್ಯಕ್ತಪಡಿಸಿದರು

ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಕಡಿಮೆ‌ ಇದೆ. ಮಾಸ್ಕ್ ಇಲ್ಲದೇ ಓಡಾಡುತ್ತಾರೆ. ಮದುವೆಗಳಲ್ಲಿ ಜನಜಂಗುಳಿ ಇದೆ. ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವಲ್ಲಿ ಮುಖ್ಯಮಂತ್ರಿಗಳು ತಡ ಮಾಡಿದರೂ ಸದ್ಯ ಎಚ್ಚೆತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಚುನಾವಣಾ ರ್ಯಾಲಿ, ಕುಂಭ ಮೇಳ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


Leave a Reply