BengalurukaranatakaState

ಚಿತ್ರೋದ್ಯಮಕ್ಕೂ ಸರಕಾರದಿಂದ ಶಾಕ್, ಧಾರಾವಾಹಿ, ರಿಯಾಲಿಟಿ ಶೋ ಎಲ್ಲವೂ ಬಂದ್..!


ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಾಳೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಿದ್ದು  ಈ ನಿಯಮ ಚಿತ್ರೋದ್ಯಮದ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ ನಿಯಮದ ಅವದಿ ಮುಗಿಯುವವರೆಗೆ ಎಲ್ಲ ಸಿನಿಮೋದ್ಯಮ ಚಟುವಟಿಕೆಗಳನ್ನು ಬಂದ್ ಮಾಡಬೇಕೆಂದು ಸರಕಾರ ಆದೇಶ ನೀಡಿದೆ.

ಮೇ.10ರ ವರೆಗೆ ಜಾರಿಯಲ್ಲಿರುವ ಟಫ್ ರೂಲ್ಸ್ ಗಳ ಅನ್ವಯ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣವನ್ನು 14 ದಿನಗಳವರೆಗೆ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳಿಂದ ಪ್ರೇಕ್ಷಕರು ದೂರ ಉಳಿದಿದ್ದು, ಈಗಾಗಲೇ ಥಿಯೇಟರ್ ಗಳ ಬಾಗಿಲು ಮುಚ್ಚಿವೆ. ಇದೀಗ ಕಠಿಣ ನಿಯಮ ಜಾರಿ ಹಿನ್ನೆಲೆಯಲ್ಲಿ ಶೂಟಿಂಗ್ ಗಳಿಗೂ ಸರ್ಕಾರ ನಿಷೇಧ ಹೇರಿರುವುದು ಸಿನಿಮೋದ್ಯಮಕ್ಕೆ ಸಂಕಷ್ಟ ಎದುರಾದಂತಾಗಿದೆ.


Leave a Reply