BelagaviState

ಪುರಸಭೆ ಕರವಸೂಲಿಗಾರನ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ


ಬೆಳಗಾವಿ: ಕೊರೊನಾ ನಿಯಂತ್ರಣಾ ಭದ್ರತಾ ಕಾರ್ಯದಲ್ಲಿದ್ದ ಪುರಸಭೆ ಸಿಬ್ಬಂದಿಗಳು ಕರವಸೂಲಿಗಾರರ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ದಂಡ ವಸೂಲಿ ಮಾಡುವಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಗಳಖೋಡ ಪುರಸಭೆಯ ಸಿಬ್ಬಂದಿಗಳಾದ ರಮೇಶ್ ಬಾಗಿ, ಭೀರಪ್ಪಾ ಬಾಗಿ ಮತ್ತು ಮುತ್ತೇಪ್ಪಾ ಯತ್ತಿನಮನಿ ಎನ್ನುವವರು ಪುರಸಭೆಯ ಕರವಸೂಲಿ ಸಿಬ್ಬಂದಿಯಾದ ಮಹೇಶ ಭಜಂತ್ರಿ ಮಾಸ್ಕ ಧರಿಸಿಲ್ಲ ಎಂಬ ಆರೋಪದ ಅಡಿಯಲ್ಲಿ ದಂಡ ವಿಧಿಸಿದ್ದು ಇದೇ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆ ಮಾಡಿದ್ದು ಖಂಡನೀಯ ಅವರ ಮೇಲೆ ಕಾನೂನು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳ ನೌಕರರು ಸರಕಾರದ ನಿರ್ದೇಶನದಂತೆ ಹಗಲಿರುಳು ದುಡಿಯುತ್ತಿದ್ದು ಅವರಿಗೆ ಆತ್ಮಸ್ಥೈರ್ಯ ತುಂಬಿ ಜೊತೆಗೆ ನಿಲ್ಲುವ ಕೆಲಸವಾಗಬೇಕು. ಸಿಬ್ಬಂದಿಗಳ ಮೇಲೆ ಅನಾವಶ್ಯಕ ಹಲ್ಲೆ ಮಾಡುವುದನ್ನು ತಪ್ಪಿಸಬೇಕು, ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಭರಮಣ್ಣವರ, ಜಿಲ್ಲಾ ಪ್ರದಾನ್ ಕಾರ್ಯದರ್ಶಿ ಎಂ ಬಿ ಗುಡಾಕೇತರ್, ಜಿಲ್ಲಾ ಸಂಘದ ಪದಾಧಿಕಾರಿಗಳು ಜಿಲ್ಲೆಯ ಶಾಖಾ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.


Leave a Reply