BengalurukaranatakaState

ಊರುಗಳಿಗೆ ತೆರಳುತ್ತಿರುವ ಸಾರ್ವಜನೀಕರು, ಖಾಸಗಿ ಬಸ್ ಗಳಿಂದ ಹಗಲು ದರೋಡೆ


ಬೆಂಗಳೂರು: ರಾಜ್ಯ ಸರಕಾರ ಕೊರೊನಾ ನಿಯಂತ್ರಿಸಲು ನಾಳೆಯಿಂದ ಲಾಕ್ ಡೌನ್ ಜಾರಿಗೊಳಿಸಿದ್ದರ ಪರಿಣಾಮ ಉದ್ಯೋಗಕ್ಕೆಂದು ಬೇರೇ ಬೇರೇ ನಗರಗಳಿಗೆ ತೆರಳಿದ್ದು ಜನ ಮತ್ತೆ ತಮ್ಮ ತಮ್ಮ ರುಗಳಿಗೆ ವಾಪಸ್ ಆಗುತ್ತಿದ್ದಾರೆ. ಈ ಪರಿಸ್ಥಿತಿಯನ್ನೆ ಸಾಧನವನ್ನಾಗಿ ಬಳಸಿಕೊಂಡ ಖಾಸಗಿ ಬಸ್ ಮಾಲಿಕರು ಹಗಲು ದರೋಡೆ ಇಳಿದಿವೆ. ಮೂಲ ಟಿಕೆಟ್ ಧರಗಿಂತ ಮೂರು ಪಟ್ಟು ಬಸ್ ದರ ಹೆಚ್ಚು ಮಾಡಿ ಹಗಲು ದರೋಡೆ ಇಳಿದಿವೆ. ಖಾಸಗಿ ಬಸ್ ದರ ಈ ಕೆಳಗಿನಂತಿವೆ.

ಬೆಂಗಳೂರುನಿಂದ  ಹಾವೇರಿ ಸಂಚರಿಸುತ್ತಿದ್ದ ಬಸ್ ಗಳ ಮೂಲ ಬೆಲೆ  750 ರೂ. ಇದ್ದು ಈಗ 5000ರೂ.ಗೆ ಹೆಚ್ಚಿಸಲಾಗಿದೆ, ಇನ್ನು  ಬೆಂಗಳೂರು –ಯಾದಗಿರಿ ಮೂಲ ಟಿಕೆಟ್ ಧರ 1000ರೂ. ಇದ್ದು ಇದೀಗ 2000ರೂ.ಗೆ ಹೆಚ್ಚಿಸಲಾಗಿದೆ.  ಬೆಂಗಳೂರು –ಕಲಬುರಗಿ ಬಸ್ ಸಂಚಾರಕ್ಕೆ 2900ರೂ.ಗೆ ಏರಿಕೆಮಾಡಲಾಗಿದೆ.

ಇನ್ನು ಬೆಂಗಳೂರು – ಶಿರಸಿ 1900ರೂ, ಬೆಂಗಳೂರು – ಶಿವಮೊಗ್ಗ 2000ರೂ. ಬೆಂಗಳೂರು – ಮಂಗಳೂರು 2500 ರೂ. ಬೆಂಗಳೂರು –ವಿಜಯಪುರ 2500ರೂ, ಬೆಂಗಳೂರು – ಬೆಳಗಾವಿ 5000ರೂ, ಬೆಂಗಳೂರು – ಹುಬ್ಬಳ್ಳಿ 5000ರೂ ಧರ ನಿಗದಿ ಪಡಿಸಿದ್ದು ಮರಳಿ ರುಗಳಿಗೆ ಹೊಗುತ್ತಿದ್ದವರಿಗೆ ಬಸ್ ದರವೇ ಹೊರೆಯಾದಂತಾಗಿದೆ.


Leave a Reply