karanatakaState

ಜಿಲ್ಲೆಯಲ್ಲಿ 425 ಆಕ್ಸಿಜನ್ ಬೆಡ್ ವ್ಯವಸ್ಥೆ ಇದೆ: ಸಚಿವ ಜೋಶಿ


ಹುಬ್ಬಳ್ಳಿ :- ಕೊರೊನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದ್ದು, ಜನರು ಸೋಂಕು ತಡೆಗಟ್ಟಲು ತಾವೇ ಕಟ್ಟುನಿಟ್ಟಿನ ನಿಯಮ ಹಾಕಿಕೊಳ್ಳಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಲಹೆ ನೀಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ರ‍್ಕಾರ ರಾಜ್ಯಗಳಿಗೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ದವಾಗಿದೆ. ಈಗಾಗಲೇ ೧.೨೨ ಲಕ್ಷ ರೆಮ್ ಡಿಸಿವಿಯರ್ ನೀಡಿದ್ದೇವೆ.
ಕೇಂದ್ರ ರ‍್ಕಾರ ಹೊಸದಾಗಿ ೫೫೧ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಅನುಮತಿ ‌ನೀಡಿದೆ ಎಂದರು.

ಲಾಕ್ ಡೌನ್ ಬಗ್ಗೆ ತಜ್ಞರು ಏನಯ ಸಲಹೆ ನೀಡಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ತಜ್ಞರ ವರದಿ ರ‍್ಕಾರದ ಮುಂದಿದೆ. ಸಚಿವ ಸಂಪುಟ ಸಭೆ ನಡೆದಿದ್ದು, ಎಲ್ಲವನ್ನು ಪರಿಶೀಲಿಸಿ ರ‍್ಕಾರ ಈ ಬಗ್ಗೆ ತರ‍್ಮಾನ ತೆಗೆದುಕೊಳ್ಳುತ್ತದೆ. ರಾಜ್ಯ ರ‍್ಕಾರ ತೆಗೆದುಕೊಳ್ಳುವ ನರ‍್ಧಾರಕ್ಕೆ ಕೇಂದ್ರ ಸಹಕಾರ ನೀಡುತ್ತದೆ ಎಂದರು.

ಕೊರೊನಾ ಸೋಂಕಿತರಿಗಾಗಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ೩೦೦ ಆಕ್ಸಿಜನ್ ಬೆಡ್ ಹಾಗೂ ಧಾರವಾಡದಲ್ಲಿ ೧೨೫ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಎಲ್ಲವನ್ನು ಅಚ್ಚುಕಟ್ಟಾಗಿ ಕೆಲಸ ನರ‍್ವಹಿಸುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಸಮಸ್ಯೆ ಇಲ್ಲವೆಂದ ಅವರು ಧಾರವಾಡ ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ತೊಂದರೆಯಾಗದಂತೆ ಜಿಲ್ಲೆಯ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ರ‍್ಕಾರದ ನಿಯಮ ಪ್ರಕಾರ ಬೆಡ್ ನೀಡಬೇಕು. ಈ ಬಗ್ಗೆ ಮಾತುಕತೆ ಕೂಡ ಮಾಡಿದ್ದೇವೆ ಎಂದು ಸಚಿವ ಜೋಶಿ ತಿಳಿಸಿದರು.


Leave a Reply