BengaluruState

ಲಾಕ್ ಡೌನ್ ಮುಗಿಯುವವರೆಗೂ ಕೋವಿಡ್ ಲಸಿಕೆ ಇಲ್ಲ: ಸಚಿವ ಡಾ.ಕೆ. ಸುಧಾಕರ್


ಬೆಂಗಳೂರು: ರಾಜ್ಯದಲ್ಲಿಹೊರಡಿಸಿದ  ಕಠಿಣ ರೂಲ್ಸ್ ಗಳಿಂದ ಕ್ಷೇತ್ರದಲ್ಲಿಯೂ ಹಲವು ಯೋಜನೆಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದ್ದದು ಕೋವಿಡ್ ಲಸಿಕೆ ನೀಡುವದರ ಮೇಲೆಯೂ ಟಫ್ ರೂಲ್ಸ್ ಪ್ರಭಾವ ಬೀರಿದೆ.  14 ದಿನಗಳ ಲಾಕ್ ಡೌನ್ ಮುಗಿಯುವವರೆಗೂ ಕೋವಿಡ್  ಲಸಿಕೆ ನೀಡುವುದಿಲ್ಲವೆಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು  ರಾಜ್ಯದಲ್ಲಿ ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಟಫ್ ರೂಲ್ಸ್ ಜಾರಿಗೆ ತರಲಾಗುತ್ತಿದೆ. ಮೇ 1 ರಿಂದ 18 -45 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ 14 ದಿನ ಟಫ್ ರೂಲ್ಸ್ ಜಾರಿಯಲ್ಲಿರುವುದರಿಂದ ರೂಲ್ಸ್ ಮುಗಿಯುವವರೆಗೆ ಲಸಿಕೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಈಗಾಗಲೇ ಮೊದಲ ಡೋಸ್ ಪಡೆದವರು 8 -10 ವಾರಗಳ ನಂತರವೂ ಎರಡನೇ ಡೋಸ್ ಲಸಿಕೆ ಪಡೆಯಬಹುದಾಗಿದೆ ಇದರಿಂದ ಯಾವುದೆ ತೊಂದರೆ ಇಲ್ಲ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.


Leave a Reply