Koppal

ತಾವರಗೇರಾ ಪಟ್ಟಣ ಪಂಚಾಯತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದ ತಹಶೀಲ್ದಾರ ಎಂ.ಸಿದ್ದೇಶ


ಕುಷ್ಟಗಿ:ತಾಲೂಕಿನ ತಾವರಗೇರಾ ಪಟ್ಟಣದ ಸ್ಥಳಿಯ ಅಧಿಕಾರಿಗಳಿಗೆ ಹಾಗೂ ಸರಕಾರಿ ಭೂಮಿ ಕಬ್ಜಾ ಮಾಡುವವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದ ಮಾನ್ಯ ತಹಶೀಲ್ದಾರ ಎಂ.ಸಿದ್ದೇಶರವರು. ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸರ್ವೇ ನಂಬರ 54 * ರಲ್ಲಿ ಸುಮಾರು 18 ಎಕರೆ 36 ಗುಂಟೆ ಜಮೀನು ಇದ್ದು. ಈ ಜಮೀನಿನಲ್ಲಿ ಸರಕಾರಿ ಗಾಯರಾಣ ಭೂಮಿ ಎಂದು ನಮೋದು ಆಗಿದ್ದು, ಈ ಸರಕಾರಿ ಜಮೀನಿನಲ್ಲಿ ಗಣ್ಯರು / ರಾಜಕೀಯ ಪ್ರಭಾರಿಗಳು ಅಕ್ರಮವಾಗಿ ಜಮೀನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ ಎಂದು ಮಂಜುನಾಥ ಎಸ್.ಕೆ, ಹಾಗೂ ಬುದ್ದಂ, ಶರಣಂ,ಗಚ್ಛಾಮಿ ಸೇವಾ ಸಂಘದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ದಿನಾಂಕ 05/02/2019 ರಿಂದ 17/03/2021 ರ ತನಕ ಮಾನ್ಯ ತಹಶೀಲ್ದಾರ ಕುಷ್ಟಗಿ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು, ಸದ್ಯ ಅಂದಿನಿಂದ ಇಲ್ಲಿಯ ತನಕ ನಾಡ ಕಾರ್ಯಲಯ ಹಾಗೂ ಸ್ಥಳಿಯ ಪಟ್ಟಣ ಪಂಚಾಯತ ಕಾರ್ಯಲಯಕ್ಕೆ ಹಲವು ಭಾರಿ ನಡೆಯುವ ಆಕ್ರಮ ಸರಕಾರಿ ಭೂಮಿ ಕಭ್ಜಾ ಮಾಡುವವರ ವಿರುದ್ದ ಧ್ವನಿ ಎತ್ತುತ್ತ ಬಂದರು, ಇದರಲ್ಲಿ ಸ್ಥಳಿಯ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದರಿಂದ ತಾಲೂಕ ದಂಢಾಧಿಕಾರಿಗಳ ಗಮನಕ್ಕೆ ಈ ವಿಷಯದ ಕುರಿತು ವಿವರಣೆ ನೀಡಿದಾಗ ಮಾನ್ಯ ತಹಶೀಲ್ದಾರ ಎಂ.ಸಿದ್ದೇಶರವರು ಸ್ಫಂಧಿಸಿ ತಾವರಗೇರಾ ಪಟ್ಟಣಕ್ಕೆ ಬಂದು ಆಕ್ರಮ ನಡೆಯುವ ಸರಕಾರಿ ಗಾಯರಾಣ ಜಮೀನಿನ ಸ್ಥಳಕ್ಕೆ (ಸ.ನಂ 54 *) ಗೆ ಆಗಮಿಸಿ, ಸ್ಥಳಿಯ ಅಧಿಕಾರಿಗಳಿಗೆ ಕರೆ ತಂದು ತತಕ್ಷಣವೇ ಈ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಭೂಮಿ ಕಬ್ಜಾ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಿ, ಜೊತೆಗೆ ಶೆಡ್ಡು ಹಾಕಿರುವುದನ್ನು ತೆರವು ಗೊಳಿಸಿ ಎಂದು ಖಡಕ್ಕಾಗಿ ಸ್ಥಳಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಈ ಸರಕಾರಿ ಜಮೀನು ಮುಂದಿನ ಪೀಳಿಗೆಗಾಗಿ ಈ ಜಮೀನು ಅವಶ್ಯವೆಂದು ಹೇಳಿದರು. ಈ ಸರಕಾರಿ ಜಮೀನಿನ ಸ್ಥಳದಲ್ಲಿ ನಾಡ ಕಚೇರಿಯ ಅಧಿಕಾರಿಗಳಾದ ಶರಣಪ್ಪ ದಾಸರ್, ಹಾಗೂ ಸೂರ್ಯಕಾಂತ್ ಪಟ್ಟಣದ ಪಿ.ಎಸ್.ಐ, ಗೀತಾಂಜಲಿ ಶಿಂಧೆಯವರು, ಪಟ್ಟಣ ಪಂಚಾಯತಿಯ ಅಧಿಕಾರಿಗಳಾದ ಪ್ರಾಣೇಶ, ಗಫೂರಸಾಬ ಮರೇಶ ನಾಯಕ್, ಶ್ಯಾಮೀದಸಾಬ ಮೆಣೇದಾಳ, ವೆಂಕಟೇಶ ಗೋತಗಿ, ಹಾಗೂ ತಾವರಗೇರಾ ಪಟ್ಟಣದ ಸಾರ್ವಜನಿಕರು ಈ ಸರಕಾರಿ ಜಮೀನಿನ ಉಳಿವಿಗಾಗಿ ನಮ್ಮ ಹೋರಾಟ ಸದಾ ಸಿದ್ದರಾಗಿರುತ್ತೇವೆ ಎಂದು ಸಾರ್ವಜನಿಕರು ಆಗ್ರಿಹಿಸಿದರು. ಸ್ಥಳಿಯ ಅಧಿಕಾರಿಗಳು ಮುಂದಿನ ದಿನಮಾನಗಳಲ್ಲಿ ಈ ಸರಕಾರಿ ಜಮೀನಿನ ಬಗ್ಗೆ ಗಮನ ಹರಿಸದೆ ಹೋದರೆ (ಅಧಿಕಾರಿಗಳು ನಿರ್ಲಕ್ಷವಹಿಸಿದರೆ ಮುಂದಾಗುವ ಅನಾಹುತಗಳಿಗೆ ತಾವೆ ಜವಬ್ದಾರರು ಎಂದು ಎಚ್ಚರಿಸಿದರು., ಬುದ್ದಂ, ಶರಣಂ,ಗಚ್ಛಾಮಿ ಸೇವಾ ಸಂಘದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು, ಹಾಗೂ ಸ್ಥಳಿಯ ಸಾರ್ವಜನಿಕರು ಈ ಸರಕಾರಿ ಜಮೀನಿನ ಉಳೀವಿಗಾಗಿ ಹೋರಾಟಕ್ಕೆ ಮುಂದಾದರು. ಇದರಲ್ಲಿ ವಿಶೇಷವಾಗಿ ನಮ್ಮ ಕಾರ್ಯಕ್ಕೆ ಸ್ಫಂಧಿಸಿದ ಮಾನ್ಯ ತಹಶೀಲ್ದಾರ ಎಂ.ಸಿದ್ದೇಶ ಇವರಿಗೆ ಹಾಗೂ ಸ್ಥಳಿಯ ಪಿ.ಎಸ್.ಐ. ಗೀತಾಂಜಲಿ ಶಿಂಧೆಯವರಿಗೆ ಅಭಿನಂಧನೆ ಸಲ್ಲಿಸಿದರು.


Leave a Reply