BelagaviState

ಇಹಲೋಕ ತ್ಯಜಿಸಿದ ಮಾಜಿ ಸಂಸದ ಎಸ್.ಬಿ ಸಿದ್ನಾಳ


ಬೆಳಗಾವಿ – ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಸಂಹದ ಎಸ್.ಬಿ.ಸಿದ್ನಾಳ ಮಂಗಳವಾರ ಬೆಳಗಿನಜಾವ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಬೆಳಗಾವಿ ರಾಜಕೀಯದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಸಿದ್ನಾಳ ಲೋಕಸಭಾ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದರು, ಮೂಲತಃ ಬೈಲಹೊಂಗಲ ತಾಲೂಕು ಸಾಣಿಕೊಪ್ಪದವರಾದ ಅವರು ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಪಡಿಸಲು ಶ್ರಮಿಸಿದ್ದರು. ಅವರ ಅಂತ್ಯಕ್ರಿಯೆ ಸಾಣಿಕೊಪ್ಪದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.

ಉದ್ಯಮಿಗಳಾದ ಶಶಿಕಾಂತ ಸಿದ್ನಾಳ ಹಾಗೂ ಶಿವಕಾಂತ ಸಿದ್ನಾಳ ಎಸ್.ಬಿ.ಸಿದ್ನಾಳ್ ಅವರ ಪುತ್ರರು.


Leave a Reply