Belagavi

ಎಸ್.ಬಿ.ಸಿದ್ನಾಳ ಅವರ ನಿಧನಕ್ಕೆ ಡಾ.ಕೋರೆ ಸಂತಾಪ


ಬೆಳಗಾವಿ:- ಸಜ್ಜನ ರಾಜಕಾರಣಿ, ಜನನಾಯಕ, ಶಿP್ಷÀಣ ಪ್ರೇಮಿ, ಸ್ನೇಹಜೀವಿ ಶ್ರೀ ಎಸ್.ಬಿ.ಸಿದ್ನಾಳ ಅವರು ನಿಧನರಾಗಿರುವುದು ಸಮಸ್ತ ನಾಡಿಗೆ ತುಂಬಲಾರದ ದುಃಖವನ್ನುಂಟು ಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯP್ಷÀರಾದ ಡಾ.ಪ್ರಭಾಕರ ಕೋರೆಯವರು ಕಂಬನಿ ಮಿಡಿದಿz್ದÁರೆ.
ಸತತ ನಾಲ್ಕು ಸಲ ಸಂಸದರಾಗಿ ಆಯ್ಕೆಗೊಂಡಿದ್ದ ಶ್ರೀ ಎಸ್.ಬಿ.ಸಿದ್ನಾಳ ಅವರು ಬೆಳಗಾವಿಯ ಜನಪ್ರಿಯ ಸಂಸದರೆನಿಸಿಕೊAಡಿದ್ದರು. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜನರ ಬಹುದಿನಗಳ ಕನಸನ್ನು ನನಸಾಗಿಸಿದ್ದರು. ನಮ್ಮ ಕೆಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದ ಸಿದ್ನಾಳರು ಲಿಂಗರಾಜ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಹಾಗೂ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದಿದ್ದರು. ಅಂತೆಯೆ ಕೆಎಲ್‌ಇ ಅಭಿಮಾನಿಗಳಾಗಿದ್ದ ಅವರು ಸಂಸ್ಥೆಯ ಅಭಿವೃದ್ಧಿಯನ್ನು ಕಂಡು ಮನಸಾರೆ ಪ್ರಶಂಸಿಸುತ್ತಿದ್ದರು.
ಶ್ರೀ ಎಸ್.ಬಿ.ಸಿದ್ನಾಳರು ತಮ್ಮ ಸೌಮ್ಯ ಹಾಗೂ ಸರಳ ಸ್ವಭಾವಗಳಿಂದ ಎಲ್ಲರಿಗೂ ಆಕರ್ಷಿತರಾಗಿದ್ದರು. ಹಾಗಾಗಿ ಅವರ ಸ್ನೇಹ ಬಳಗವು ಹಿರಿದಾಗಿತ್ತು. ನೇರ ನಡೆನುಡಿಯ ಧೀಮಂತ ನಾಯಕರಾಗಿದ್ದ ಅವರು ಒಂದು ಸಂದರ್ಭದಲ್ಲಿ ಬೆಳಗಾವಿ ಜಿ¯್ಲೆಯಲ್ಲಿ ಕಾಂಗ್ರೆಸ್ ಪP್ಷÀವನ್ನು ಬಲಪಡಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡ ಹಾಗೆ ಬಿಜೆಪಿ ಪP್ಷÀದ ಪ್ರಗತಿಪರ ವಿಚಾರಗಳಿಗೆ ಮಾರುಹೋಗಿ ಪP್ಷÀವನ್ನು ಬಲಪಡಿಸುವಲ್ಲಿ ನಿರತರಾಗಿದ್ದರು.
ನಿಷ್ಠಾವಂತ ಸಂಘಟಕರಾಗಿ ಬೆಳಗಾವಿ ಗಡಿಜಿ¯್ಲÉಯಲ್ಲಿ ಮಹತ್ವದ ಕೆಲಸ ಕಾರ್ಯಗಳನ್ನು ಮಾಡಿದರು, ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಅಂತೆಯೇ ವೀರಶೈವ ಲಿಂಗಾಯತ ಧರ್ಮವನ್ನು ಸಂಘಟಿಸುವಲ್ಲಿ ಮಹತ್ವದ ಕಾರ್ಯಮಾಡಿದರು. ನನ್ನೊಂದಿಗೆ ಆಪ್ತ ಹಾಗೂ ನಿಕಟ ಸಂಪರ್ಕ ಹೊಂದಿದ್ದ ಎಸ್.ಬಿ.ಸಿದ್ನಾಳರು ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸಿದರು, ಮಾರ್ಗದರ್ಶಿಸಿದರು. ಅವರ ಸ್ನೇಹಪರತೆ ನನಗೆ ಸಂತೋಷ ಹಾಗೂ ಹೆಮ್ಮೆಯನ್ನುಂಟು ಮಾಡುತ್ತಿತ್ತು. ನನ್ನ ಸಹೋದರ ಸಮಾನರಾಗಿದ್ದ ಅವರ ಅಕಾಲಿಕ ನಿಧನ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರು ಅಪಾರ ಕುಟುಂಬವರ್ಗದವರನ್ನು ಅಗಲಿದ್ದಾರೆ. ಅವರೆಲ್ಲರಿಗೂ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ. ಕೆಎಲ್‌ಇ ಸಂಸ್ಥೆಯ ಸಮಸ್ತ ಕುಟುಂಬದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಡಾ.ಪ್ರಭಾಕರ ಕೋರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply