BelagaviState

ಮರಳಿ ಗೂಡಿಗೆ ಹಾರುತ್ತಿರುವ ಹಕ್ಕಿಗಳೂ, ಕೇಂದ್ರ ಬಸ್ ನಿಲ್ದಾಣದಲ್ಲಿ ಜನವೋ ಜನ


ಬೆಳಗಾವಿ: ರಾಜ್ಯ ಸರಕಾರ ಇಂದು ರಾತ್ರಿಯಿಂದಲೇ ಕಠೀಣ ಕರ್ಪ್ಯೂ ಜಾರಿ ಮಾಡಿದ್ದರಿಂದ ಬೆಳಗಾವಿಗೆ ಆಗಮಿಸಿದ್ದ ಜನ ಊರುಗಳಿಗೆ ಗುಂಪು ಗುಂಪಾಗಿ ವಾಪಸ್ಸಾಗುತ್ತಿದ್ದು ಬೆಳಿಗ್ಗೆಯಿಂದ ಕೇಂದ್ರ ಬಸ್ ನಿಲ್ಧಾಣದಲ್ಲಿ ಜಮೆಗೊಂಡಿದ್ದಾರೆ.

ಉದ್ಯೋಗಗಳನ್ನು ಅರಿಸಿ ಬೇರೆ ರಾಜ್ಯಗಳಿಂದ ಮತ್ತು ದೂರದ ರುಗಳಿಂದ ಬೆಳಗಾವಿಗೆ ಬಂದ ಜನ ಬದುಕು ಕಟ್ಟಿಕೊಂಡಿದ್ದರು. ಇದೀಗ 14 ದಿನಗಳವರೆಗೆ ಲಾಕ್ ಡೌನ್ ಘೋಷಿಸಿದ ಹಿನ್ನೆಲೆ ದಿಕ್ಕು ತೋಚದ ಜನ ಮರಳಿ ಹಕ್ಕಿ ಗೂಡಿಗೆ ಎನ್ನುವಂತೆ ತಮ್ಮ ಸ್ವಂತ ರುಗಳಿಗೆ ವಾಪಸ್ಸಾಗುತ್ತಿದ್ದಾರೆ.

ಇಂದು ರಾತ್ರಿಯಿಂದ ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಕೂಲಿ ಕೆಲಸಗಾರರು, ದಿನಗೂಲಿ ನೌಕರರು ತಮ್ಮ ತಮ್ಮ ಸ್ವಗ್ರಾಮಗಳತ್ತ ಮುಖಮಾಡಿದ್ದಾರೆ. ಇನ್ನು ವಿಶ್ವ ವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಿಕೆ ಗಿದ್ದರಿಂದ ವಿದ್ಯಾರ್ಥಿಗಳೂ ಕೂಡ ತಮ್ಮ ತಮ್ಮ ಊರುಗಳಿಗೆ ವಾಪಸ್ಸ ತೆರಳುತ್ತಿದ್ದಾರೆ.


Leave a Reply