NationalNew DelhiState

ಚುನಾವಣಾ ಪಲಿತಾಂಶ ವಿಜಯೋತ್ಸವಕ್ಕೆ ಬ್ರೆಕ್ ಹಾಕಿದ ಚುನಾವಣಾ ಆಯೋಗ


ದೆಹಲಿ: ಏಪ್ರಿಲ್ 27: ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ದಾಖಲೆಯನ್ನೇ ಬರೆಯುತ್ತಿದ್ದು ಇದರಿಂದ ಚುನಾವಣಾ ಫಲಿತಾಂಶದ ವಿಜಯೋತ್ಸವಕ್ಕೂ ಬ್ರೆಕ್ ಬಿದ್ದಿದೆ. ಈ ಕುರಿತು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2ರಂದು ಪ್ರಕಟಗೊಳ್ಳಲಿದ್ದು, ಮತದಾನಕ್ಕೂ ಮುನ್ನ ಅಥವಾ ಮತದಾನದ ನಂತರ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಹಾಗೂ ಮೆರವಣಿಗೆ ಹಮ್ಮಿಕೊಳ್ಳುವಂತಿಲ್ಲ ಎಂದು ಆದೇಶಿಸಿದೆ.

ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯು ಪ್ರಮಾಣ ಪತ್ರ ಸ್ವೀಕರಿಸುವಾಗಲೂ ಅವರೊಂದಿಗೆ ಇಬ್ಬರಿಗೂ ಹೆಚ್ಚು ಮಂದಿ ಇರುವಂತಿಲ್ಲ ಎಂದು ನಿಯಮ ಹೇರಿದೆ. ಆಗಸ್ಟ್‌ 21ರಂದು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಕೊರೊನಾ ಸೋಂಕು ಹರಡುವಿಕೆ ತಡೆಯಲು ಎಲ್ಲಾ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಅನುಸರಿಸಬೇಕಾದ ಶಿಷ್ಟಾಚಾರಗಳನ್ನು ರೂಪಿಸಿತ್ತು. ಫಲಿತಾಂಶ ದಿನದಂದೂ ಇದು ಅನ್ವಯವಾಗುತ್ತದೆ ಎಂದು ಆಯೋಗ ತಿಳಿಸಿದೆ.


Leave a Reply