bagalkotState

ಕ್ರೂಜರ್ ಹರಿದು ಆರು ವರ್ಷದ ಬಾಲಕನ ಸಾವು


ಬಾಗಲಕೋಟೆ: ಕ್ರೂಜರ್ ಹರಿದು ಆರು ವರ್ಷದ ಬಾಲಕ ಮೃತ ಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಕ್ರಾಸ್ ಬಳಿ ನಡೆದಿದೆ.

ಗೋಳಪ್ಪ ಪೂಜಾರಿ ಆರು ವರ್ಷದ (06) ಮೃತ ಬಾಲಕ ಎಂದು ಗುರುತಿಸಲಾಗಿದ್ದು ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ರಾಷ್ಟ್ರೀಯ ಹೆದ್ದಾರಿ 218 ರ ಪಕ್ಕದಲ್ಲಿ  ತೋಟ ಇದ್ದಿದ್ದರಿಂದ  ಬಾಲಕ ರಸ್ತೆದಾಟುವ ವೇಳೆ ಈ ಒಂದು ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ನೊಂದಣಿ ಸಂಖ್ಯೆ ಹೊಂದಿರುವ ಕೆ ಎ 28 ಪಿ 0953 ಸಂಖ್ಯೆಯ ಕ್ರೂಜರ್ ಹರಿದು ಘಟನೆ ಸಂಭವಿಸಿದ್ದು ಕ್ರೊಜರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಚಾಲಕನಿಗಾಗಿ ಪೋಲಿಸರು ಜಾಲ ಬಿಸಿದ್ದಾರೆ.  ಘಟನಾ ಸ್ಥಳಕ್ಕೆ ಬೀಳಗಿ ಪಿ ಎಸ್ ಐ ಕೆ ಟಿ ಮಾನೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಕುರಿತು ಬೀಳಗಿ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.


Leave a Reply