BengalurukaranatakaState

ದಿನಪೂರ್ತಿ ಮಧ್ಯ ಸಿಗಲ್ಲಾ, ನೀವು ಮದ್ಯಪ್ರಿಯರಿದ್ರೆ ಮೊದಲೆ ಟೈಮ್ ನೋಡ್ಕೋಳಿ


ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಕರ್ಪ್ಯೂ ಆದೇಶ ಹೊರಡಿಸಿದ್ದು ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದೆ. ನಿಯಮಗಳ ಅನುಸಾರ ಅಗತ್ಯ ವಸ್ತುಗಳು ಬೆ.6ರಿಂದ 10 ಗಂಟೆಯವರೆಗೆ ಮಾತ್ರ ಸಮಯ ನಿಗಧಿ ಪಡಿಸಲಾಗಿತ್ತು ಆದರೆ ಇದೀಗ ಮಧ್ಯ ಮಾರಾಟಕ್ಕೂ ಸಮಯದ ನಿಗದಿ ಮಾಡಲಾಗಿದ್ದು

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅವಕಾಶವನ್ನು ನೀಡಲಾಗಿದೆ.  ಈ ಮೂಲಕ ದಿನಪೂರ್ತಿ ಮದ್ಯ ಸಿಗುತ್ತೆ ಎಂದು ಖುಷಿಯಲ್ಲಿದ್ದ ಮದ್ಯಪ್ರಿಯರಿಗೆ ಶಾಕ್ ನೀಡಿದ್ದುಈ ಕುರಿತು ಅಬಕಾರಿ ಸಚಿವ ಗೋಪಾಲಯ್ಯ ಅವರು ಮಾತನಾಡಿ ಕೊರೋನಾ ಕರ್ಪ್ಯೂವನ್ನು ಇಂದು ರಾತ್ರಿ 9 ಗಂಟೆಯಿಂದ ಮೇ.12ರವರೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಕರ್ಪ್ಯೂ ನಡುವೆಯೂ ರಾಜ್ಯ ಸರ್ಕಾರದಿಂದ ಬಾರ್ ಓಪನ್ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಮಯ ನಿಗದಿಪಡಿಸಿರುವಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಅದರಲ್ಲೂ ಪಾರ್ಸಲ್ ತೆಗೆದುಕೊಂಡು ಹೋಗೋದಕ್ಕೆ ಮಾತ್ರವೇ ಅನುಮತಿ ನೀಡಲಾಗಿದೆ. ಈ ಸಮಯದಲ್ಲಿ ಮಾತ್ರವೇ ಮದ್ಯ ಮಾರಾಟಕ್ಕೆ ಅವಕಾಶ. ಇದನ್ನು ಹೊರತುಪಡಿಸಿ, ಬೇರೆ ಸಮಯದಲ್ಲಿ ಮಾರಾಟ ಮಾಡುವಂತಿಲ್ಲ ಎಂಬುದಾಗಿ ತಿಳಿಸಿದರು.

 


Leave a Reply