BelagaviState

ಕೋವಿಡ್ ಲಸಿಕಾ ಅಭಿಯಾನಕ್ಕೆ ಶಾಸಕ ಅನಿಲ ಬೆನಕೆ ಅವರಿಂದ ಚಾಲನೆ…


ದೇಶ ಕೋವಿಡ್ ಮಾಹಾಮಾರಿ ವಿರುದ್ಧ ಹೊರಾಡುತ್ತಿದೆ.‌ ಕೋವಿಡ್ ವಿರುದ್ಧ ಹೊರಾಡಲು ವಾಕ್ಷಿನ್ ಹಾಕಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.‌

ನಗರದ ರೇಣುಕಾ ಮಂದಿರದಲ್ಲಿ ಲಸಿಕಾ ಅಭಿಯಾನ್ಕಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಇಂದು ತಾನಾಜಿಗಲ್ಲಿ ಸಮರ್ಧ ನಗರದಲ್ಲಿ ಮಹಾಮಾರಿ ಕರೋನ ವಿರುದ್ಧ ಹೊರಾಡುವ ಪರಿಸ್ಥಿತಿ ಬಂದಿದೆ. ಈ ಮಹಾಮಾರಿ ವಿರುದ್ಧ ಹೋರಾಡಲು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು

ಕೊವಿಶಿಲ್ಡ್ ಲಸಿಕೆಯನ್ನು ನನ್ನ ಭಾಗದ ಜನರಿಗೆ ನೀಡಲಾಗುತ್ತಿದೆ.‌ ಕರೊನಾ ಲಸಿಕೆ ಪಡೆಯೋದರಿಂದ ಸಾಮನ್ಯವಾಗಿ ಸೋಂಕು ಆಗೊದಿಲ್ಲ ಒಂದು ವೇಳೆ ಸೋಂಕು ತಗುಲಿದರು ಅದರ ಪರಿಣಾಮ ಶರಿರದ ಮೇಲೆ ಜಾಸ್ತಿ ಪರಿಣಾಮ ಬಿರುವದಿಲ್ಲ. ಈಗಾಗಲೇ ಬೆಳಗಾವಿ ತಾಲೂಕಿನಲ್ಲಿ 1 ಲಕ್ಷಕ್ಕೂ ಅಧಿಕ ಜನರು ಲಸಿಲೆ ಪಡೆದುಕೊಂಡಿದ್ದಾರೆ ಎಂದು ಶಾಸಕ ಅನಿಲ ಬೆನಕೆ ಅವರು ತಿಳಿಸಿದರು.‌


Leave a Reply