BelagaviState

ಮಲ್ಲಿಗವಾಡದ ಸೋಮೇಶ್ವರ ಜಾತ್ರೆ, ಸರಳವಾಗಿ ರಥೋತ್ಸವ


ಹುಬ್ಬಳ್ಳಿ: ತಾಲೂಕಿನ ಮಲ್ಲಿಗವಾಡ ಗ್ರಾಮದ ಸೋಮೇಶ್ವರ ದೇವಸ್ಥಾನ ಜಾತ್ರೆ ಸರಳ, ರಥೋತ್ಸವ ಸಂಪನ್ನವಾಗಿ ನಡೆಯಿತು.

ಸರಕಾರದ ಕೋವಿಡ್-19 ಮಾರ್ಗಸೂಚಿ ಅನ್ವಯ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಜಾತ್ರೆಯನ್ನು ರದ್ದುಪಡಿಸಿದರು, ಗ್ರಾಮಸ್ಥರು ಐದು ಹೆಜ್ಜೆ ರಥ ಸಾಗಿಸುವುದಾಗಿ ಮನವಿ ಮಾಡಿದ್ದರಿಂದ ತಾಲೂಕು ಆಡಳಿತ ಅವಕಾಶ ಮಾಡಿಕೊಡಲಾಯಿತು. ಭದ್ರತೆಯ ದೃಷ್ಠಿಯಿಂದ ಜಾತ್ರೆಗೆ ಇಬ್ಬರು ಪೋಲಿಸ್ ಸಿಬ್ಬಂದಿಯನ್ನು ನೇಮಿಸಲಾಗಿತು. ಭಕ್ತರು ಬೆಳ್ಳಿಗೆಯಿಂದ ಸಂಜೆತನಕ ದೇವಸ್ಥಾನಕ್ಕೆ ಮಾಸ್ಕ್ ಧರಿಸಿ ಆಗಮಿಸಿ ದರ್ಶನ ಪಡೆದುಕೊಂಡರು. ಸಂಜೆ 5 ಗಂಟೆಗೆ ಸೋಮೇಶ್ವರ ರಥೋತ್ಸವಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಐದು ಹೆಜ್ಜೆ ರಥ ಸಾಗಿಸುವ ಮೂಲಕ ಸಂಪನ್ನವಾಗಿ ರಥೋತ್ಸವ ಆಚರಿಸಿದರು.


Leave a Reply