Statevijayapur

ಜನತಾ ಕರ್ಫೂ ಪಾಲಿಸುವ ಕುರಿತು ತಾಲ್ಲೂಕು ಮಟ್ಟದ ಅದಿಕಾರಿಗಳ ತುರ್ತು ಸಭೆ, ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ 


ಚಡಚಣ:ಕೋವಿಡ್‌ 2 ನೇ ಅಲೆ ಅತ್ಯಂತ್ಯ ವೇಗವಾಗಿ ಹರಡುತ್ತಿರುವದರಿಂದ ಸರ್ಕಾರ ಜಾರಿಗೊಳಿಸಿದ  ಜನತಾ ಕರ್ಫೂ  ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ತಹಶಿಲ್ದಾರ ಸುರೇಶ ಚವಲರ ಹೇಳಿದರು.

ಮಂಗಳವಾರ  ತಾ.ಪಂ.ಕಚೇರಿಯಲ್ಲಿ ಜನತಾ ಕರ್ಫೂ    ಮಾರ್ಗಸೂಚಿ ಕಟ್ಟು ನಿಟ್ಟಾಗಿ ಪಾಲಿಸುವ ಕುರಿತು ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಜಾತ್ರೆ,ಧಾರ್ಮಿಕ ಆಚರಣೆಗಳನ್ನು ನಿಷೇಸಿಧಿಸಿದೆ.ಮದುವೆ ,ಶವ ಸಂಸ್ಕಾರಗಳಲ್ಲಿ ಜನ ಸೇರುವದಕ್ಕೆ ನಿರ್ಭಂಧ ಹೇರಿದೆ.ಅಗತ್ಯ ಸೇವೆ ಒದಗಿಸುವ ಅಂಗಡಿ ಮುಂಗಟ್ಟುಗಳಲ್ಲಿ ಜನರು ದೈಹಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ ಧರಿಸಿ  ವ್ಯವಹರಿಸಲು ಅಧಿಕಾರಿಗಳು ವರ್ತಕರಿಗೆ ಎಚ್ಚರಿಕೆ ನೀಡಬೇಕು. ಅಗತ್ಯ ಬಿದ್ದರೆ ದಂಡ ಹಾಕಲು ಹಿಂಜೆರೆಯಬೇಡಿ ಎಂದು ತಾಕೀತು ಮಾಡಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ಹಾಹಕ ಅಧಿಕಾರಿ ಸಂಜಯ ಖಡಗೇಕರ  ಮಾತನಾಡಿ,ಗ್ರಾಮಗಳಲ್ಲಿ ಮಾರ್ಗಸೂಚಿ ಪಾಲಿಸದವರ ಕುರಿತು ಪಿಡಿಓಗಳು ಹಾಗೂ ಗ್ರಾಮ ಲೆಕ್ಕಧಿಕಾರಿಗಳು ತಕ್ಷಣ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು.ಕರ್ಫೂನಿಂದಾಗಿ ನಗರ ತೊರೆದು ಹಳ್ಳಿಗಳಿಗೆ ಬರುವ ಕಾರ್ಮಿಕರಿಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸಕೊಡುವ ಕೆಲಸಗಳು ನಿರಂತರವಾಗಿ ನಡೆಯಬೇಕು.ಅದಕ್ಕಾಗಿ ಸರ್ಕರ ಸಾಕಷ್ಟು ಅನುದಾನ ಒದಗಿಸಿದೆ.ಕೆಲಸ ಕಳೆದುಕೊಂಡು ಬಂದವರಿಗೆ ಆತ್ಮಸ್ಥೈರ್ಯ ತುಂಬಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

ಸಭೆಯಲ್ಲಿ ವೈದ್ಯಾದಿಕಾರಿ ಡಾ.ಜಾನ್‌ ಕಠವಠೆ, ತಾಲ್ಲೂಕು ಪಂಚಾಯ್ತಿ ಯೋಜನಾಧಿಕಾರಿ ಎಸ್‌.ಆರ್.ಕೊಟ್ಟಲಗಿ, ಸಹಾಯಕ ನಿರ್ದೇಶಕ ಮಹಾಂತೇಶ ಹೊಗಡೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು,ಪೊಲೀಸ್‌  ಅಧಿಕಾರಿಗಳು  ಸೇರಿದಂತೆ ತಾಲ್ಲೂಕಿನ ಪಿಡಿಓಗಳು,ಗ್ರಾಮ ಲೆಕ್ಕಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

 


Leave a Reply