Statevijayapur

ಹಾರಿಹೋದ ಮನೆಯ ಛಾವಣಿ, ಪ್ರಾಣ ಕಳೆದುಕೊಂಡ ಮಗು


ವಿಜಯಪುರ: ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮನೆಯ ಛಾವಣಿಯು ಹಾರಿ ಹೋಗಿ  ತೊಟ್ಟಿಲಲ್ಲಿ ಮಲಗಿದ್ದ ಮಗು ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸುರಗಿಹಳಿ ಗ್ರಾಮದಲ್ಲಿ  ಜರುಗಿದೆ.

ಅಬ್ದುಲ್ ರೆಹಮಾನ್ ಎಂಬುವವರ ಮನೆಯ ತಗಡಿಗಳ ಛಾವಣಿ ಗಾಳಿಗೆ ಹಾರಿ ಹೋಗಿದ್ದು  ಅದಕ್ಕೆ ಕಟ್ಟಿದ ಜೊಳಿಗೆ ಮಗು ಸಮೇತ ಹಾರಿ ಹೋಗಿ ಲೈಟ್ ಕಂಬಕ್ಕೆ ಜೊತಿ ಬಿದ್ದು ಮಗು ಸಾವನಪ್ಪಿದೆ.

ಸ್ಥಳಕ್ಕೆ  ಗ್ರಾಪಂ ಸದಸ್ಯಕಾಂತನಗೌಡ ಪಾಟೀಲ ಬೇಟಿ ನೀಡಿ ಕಡು ಬಡವರಾಗಿರುವ ಅಬ್ದುಲ್ ರೆಹಮಾನ್ ಅವರ ಕುಟುಂಬಕ್ಕೆ ಸರಕಾರದಿಂದ ಗ್ರಾಮ ಲೆಕ್ಕಾಧಿಕಾರಿಗಳು  ಪರಿಹಾರ ಒದಗಿಸುವ ಕೆಲಸ ಮಾಡಬೇಕೆಂದು ಬೇಳಿದ್ದಾರೆ.

ಇನ್ನು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು ಹೇಳಿದರು.


Leave a Reply