Belagavi

ಪಿನ್ ಡ್ರಾಪ್ ಸೈಲೆಂಟ್ ಆಯ್ತು ಬೆಳಗಾವಿ


ಬೆಳಗಾವಿ:ಕೊರೊನಾ ಕಟ್ಟಿ ಹಾಕಲು ರಾಜ್ಯ ಸರಕಾರ ಹೊರಡಿಸಿರುವ ಜನತಾ ಕರ್ಫ್ಯೂ ಜಾರಿಯಾಗಿದ್ದು ಮೊದಲನೆ ದಿನವಾದ ಇಂದು ಗಡಿ ಜಿಲ್ಲೆಯಾದ ಬೆಳಗಾವಿ ನಿಧಾನವಾಗಿ ಸ್ಥಬ್ದವಾಗುತ್ತಿದ್ದು, ಸಾರ್ವಜನೀಕರನ್ನು ಹೊರ ಬರದಂತೆ ತಡೆಯಲು ಪೊಲೀಸ್ ಪಡೆ ಹರಸಾಹಸ ಪಡುತ್ತಿದ್ದ ದೃಶ್ಯಗಳು ಅಲ್ಲಲ್ಲಿ  ಕಂಡು ಬಂದವು.

ಮೇ.2ರ ವರೆಗೆ ಜನತಾ ಕರ್ಫ್ಯೂ ಜಾರಿಯಾಗಿದ್ದು ಸಾರ್ವಜನೀಕರು ಅನಾವಶ್ಯಕವಾಗಿ ಮನೆ ಬಿಟ್ಟು ಹೊರ ಬರದಂತೆ ಸೂಚನೆ ನೀಡಲಾಗಿದೆ ಆದರೂ ಮೊದಲ ದಿನವಾದ ಇಂದು ಬೆಳಗಾವಿಯನ್ನು ಬಂದ್ ಮಾಡಲು ಖಾಕಿಪಡೆ ಸಾಹಸ ಮಾಡಲೇ ಬೇಕಾಯಿತು, ಅಗತ್ಯ ವಸ್ತುಗಳ ಮಾರಾಟಗಾರರನ್ನು, ಗ್ರಾಹಕರನ್ನು 10 ಗಂಟೆಯ ನಂತರ ವಾಪಸ್ ಕಳಿಸಲು ಪೊಲೀಸರ ಪ್ರಯತ್ನ ಜೋರಾಗೇ ಇತ್ತು. ಇನ್ನೂ ವಾಹನಗಳಲ್ಲಿ ರಸ್ತೆ ಸಂಚಾರ ಮಾಡಿ ಯಾರು ಅನಾವಶ್ಯಕ ಹೊರ ಬರದಂತೆ ಅನೌನ್ಸ್ ಮಾಡಿದರೂ ಕೂಡ ಸಾರ್ವಜನೀಕರು ಅಲ್ಲಲ್ಲಿ ಹೊರಗೆ ಓಡಾಡುವ ದೃಶ್ಯಗಳು ಕಂಡುಬಂದವು.

ನಗರದ ಪ್ರಮುಖ ಬೀದಿಗಳಲ್ಲಿ ಜನರ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿದ್ದು  ಗಣಪತಿ ಗಲ್ಲಿ, ಮಾರುತಿಗಲ್ಲಿ, ತರಕಾರಿ ಮಾರ್ಕೆಟ್,‌ ಖಡೇಬಜಾರ್, ಮೀನು ಮಾರುಕಟ್ಟೆ, ಮಾಂಸ, ಸರಾಯಿ ತೆಗೆದುಕೊಳ್ಳಲುಪ್ರಮುಖ ಮಾರ್ಕೆಟ್‌ಗಳನ್ನು ಸಮಯಕ್ಕೆ ಸರಿಯಾಗಿ ಬಂದ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ನಾಳೆ 6 ಗಂಟೆಯವರೆಗೆ ಕುಂದಾನಗರಿ ಸಂಪೂರ್ಣ ಸ್ಥಬ್ದವಾಗಿ ಇರಲಿದ್ದು, ಅಗತ್ಯ ಸೇವೆಗಳಿ ಮಾತ್ರ ಅವಕಾಶ ನೀಡಲಾಗಿದೆ.‌


Leave a Reply