Belagavikaranataka

ಈ ತಿಂಗಳು ಅಕ್ಕಿ ಇಲ್ಲಾ, ಸತ್ತೋದ್ರೆ ಒಳ್ಳೇದು: ಸಚಿವ ಉಮೇಶ್ ಕತ್ತಿ ಆಡಿಯೋ ವೈರಲ್


ಬೆಳಗಾವಿ : ಮುಂದಿನ ತಿಂಗಳಿನಿಂದ ಅಕ್ಕಿ ಕೊಟ್ಟರೆ ಈ ತಿಂಗಳು ಲಾಕ್ ಡೌನ್ ಅಲ್ಲಿ ಏನು ತಿನ್ನೋದು, ಉಪವಾಸ ಇರಬೇಕಾ ಸತ್ತೋಗಬೇಕಾ ಎಂದು ಕೇಳಿದ ನಾಗರಿಕರೊಬ್ಬರಿಗೆ ಸಚಿವ ಉಮೇಶ್ ಕತ್ತಿ, ಸಾಯೋದು ಒಳ್ಳೆಯದು ಎಂದು ಹೇಳಿ ದರ್ಪ ಮೇರೆದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

ನಾಗರಿಕರೊಬ್ಬರು ಸಚಿವ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿ ಸರ್ಕಾರದಿಂದ ಕೊಡುತ್ತಿದ್ದಂತ ರೇಷನ್ ಅಕ್ಕಿ ಕಡಿತ ಮಾಡೋದು ಸರಿಯಲ್ಲ. ಕಡಿತ ಮಾಡ್ಬೇಡಿ. ಲಾಕ್ ಡೌನ್ ಬೇರೆ ಇದೆ. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ, ಸಚಿವ ಉಮೇಶ್ ಕತ್ತಿ, ಸಾಯೋದು ಒಳ್ಳೆಯದು. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಸಚಿವರು ಅಹಂಕಾರದಿಂದ ಮಾತನಾಡಿದ ಆಡಿಯೋ ಬಾರಿ ವೈರಲ್ ಆಗಿದ್ದು. ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯ ಹಾಗೂ ಸಚಿವ ಉಮೇಶ್ ಕತ್ತಿ ಮಾತನಾಡಿರುವಂತ ಸಂಭಾಷಣೆ ಎಂದು ಹೇಳಲಾಗುತ್ತಿದೆ.

2 ಕೆಜಿ ಅಕ್ಕಿ ಮಾಡಿದ್ದೀರಾ ಸಾಲುತ್ತಾ ಎಂಬುದಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಕತ್ತಿ 3 ಕೆಜಿ ರಾಗಿ ಮಾಡಿತ್ತೀವಿ ಎಂದಿದ್ದಾರೆ. ಉತ್ತರ ಕರ್ನಾಟಕದ ಜನ ರಾಗಿ ತಿನ್ನಾತ್ತಾರಾ ಎಂದು ಮರು ಪ್ರಶ್ನಿಸಿದ್ದಕ್ಕೆ, 2 ಕೆಜಿ ಜೋಳ ಮಾಡಿದ್ದೀವಿ ಎಂದಿದ್ದಾರೆ. ಸಾರ್ ತಿಂಗಳಿಗೆ 2 ಕೆಜಿ ಸಾಲುತ್ತಾ ಅಂದ್ರೆ, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತೆ ಅಂತ ಸಚಿವರು ಹೇಳಿದ್ದಾರೆ.

ಆಯ್ತು ಸಾರ್.. ಅಕ್ಕಿ, ಜೋಳ ಯಾವಾಗ ಕೊಡ್ತೀರಿ ಅಂದ ಈಶ್ವರ್ ಅವರ ಮಾತಿಗೆ, ಬರುವ ತಿಂಗಳ ಮೇ ನಲ್ಲಿ ನೀಡುತ್ತೇವೆ ಅಂತ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಾರ್ ಬರುವ ತಿಂಗಳು ಕೊಡ್ತೀರಾ.. ಅಲ್ಲಿಯವರೆಗೆ ಉಪವಾಸ ಇರುದಾ ಅಥವಾ ಸತ್ತು ಹೋಗುದಾ ಅಂದಾಗ, ಸಚಿವ ಉಮೇಶ್ ಕತ್ತಿ ಸತ್ತು ಹೋಗೋದು ಒಳ್ಳೆದು, ಅದಕ್ಕಿಂತ ಪೋನ್ ಮಾಡುವುದು ಬಿಡಿ ಎಂದು ಕರೆ ಕಟ್ ಆಗಿದ್ದು ಸಚಿವರ ದುರಹಂಕಾರದ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.


Leave a Reply