Belagavi

ಕೊವೀಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ : ಮಾಮನಿ


ಸವದತ್ತಿ ೨೮ ಮಹಾಮಾರಿ ಕೊರೋನಾ ರೊಗವು ಈಡಿ ಜಗತ್ತನ್ನೇ ಆವರಿಸಿದೆ ಅದನ್ನು ನಾವೇಲ್ಲರೂ ನಮ್ಮದೇಶದಿಂದ ಹೊಡೆದೊಡಿಸಬೇಕಾಗಿದೆ ಆದ್ದರಿಂದ ತಾಲೂಕಿನ ಸಾರ್ವಜನಿಕರು ಮೊದಲು ತಮ್ಮ ತಮ್ಮ ಜೀವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಜೀವ ಉಳಿದರೆ ಜೀವ ಆನಿಟ್ಟಿನಲ್ಲಿ ಎಲ್ಲರು ಆಲೊಚಿಸಬೇಕು. ಎಲ್ಲರೂ ಕೊವೀಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ವ್ಯಾಪಾರಸ್ತರು ಬೇಳೆಗ್ಗೆ ೬ ಘಂಟೆಯಿAದ ೧೦ ಘಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ಮಾಡಬೇಕು. ತಾಲುಕಿನ ಯಾವಗ್ರಾಮಗಳಲ್ಲಿಯೂ ಮದುವೆ ಸಮಾರಂಭಗಳಿಗೆ ಸಂತೆ ಜಾತ್ರೆಗಳಿಗೆ ಅವಕಾಶ ಇರುವುದಿಲ್ಲ ಈ ಒಂದು ಸರಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಜೀವ ಇದ್ದರೆ ಜೀವನ ಎಂದು ಉಪ ಸಬಾಧ್ಯಕ್ಷ ಆನಂದ ಮಾಮನಿ ಮಾತನಾಡಿದರು
ಅವರು ತಾಲೂಕು ಪಂಚಾಯತ ಸಭಾಭವನದಲ್ಲಿ ಕೋರೋನಾ ಕೊವೀಡ್ ೧೯. ಮತ್ತು ಉದ್ಯೋಗ ಖಾತರಿ ಅನುಷ್ಟಾನ. ಎಂಬ ವಿಷಯವಾಗಿ ತಾಲೂಕಾಮಟ್ಟದ ಅಧಿಕಾರಿಗಳ ಮತ್ತು ಎರಡೂ ಪುರಸಭೆ ಮುಖ್ಯಾಧಿಕಾರಿಗಳು ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಅದ್ಯಕ್ಷರ ಸದಸ್ಯರ ಆಶಾ ಅಂಗನವಾಡಿ ಕಾರ್ಯಕರ್ತೆಯರ ವೀಡಿಯೋ ಸಂವಾದವನ್ನು ಅವರು ಮನೆಯಲ್ಲಿಯೇ ಕುಳಿತು ಸಂವಾದ ನಡೆಸಿದರು
ಅವರಿಗೆ ಕೋರೋನಾ ದೃಡಪಟ್ಟಿದ್ದರಿಂದ ಮನೆಯಲ್ಲಿಯೇ ಕುಳಿತಿ ವಿಡಿಯೋ ಸಂವಾದ ನಡೆಯಿಸಿ ಕೊಟ್ಟರು ನಂತರ ತಾಲೂಕಾ ಮಟ್ಟದ ಏಲ್ಲಧಿಕಾರಿಗಳು ಕಡ್ಡಾಯವಾಗಿ ಮಾಸ್ಕ ಧರಸಿ ಸೈನಿಟೈಝರ ಬಳಕೆ ಮಾಡುವುದನ್ನು ಮಾಡಲೇಬೇಕು ಮತ್ತು ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಮಾರ್ಪಾಡು ಮಾಡುವುದಾದರೆ ತಹಶೀಲ್ದಾರ ಮತ್ತು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಬೇಕು ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಕುರಿತು ಮಾತನಾಡಿದ ಅವರು ಬಹಳಷ್ಟು ಪಂಚಾಯತ ಗಳಲ್ಲಿ ಜಲಜೀವನ ಮಿಷನ್ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಕುಡಿಯುವ ನೀರಿನ ಕಾಗಾರಿ ಸರಿಯಾಗಿ ನಡೆಯುತ್ತಿಲ್ಲವೆಂದು ಸಾರ್ವಜನಿಕರು ದೂರು ನೀಡುತ್ತಿದ್ದಾರೆ ಆದ್ದರಿಂದ ತಹಶಿಲ್ದಾರ ಮತ್ತು ತಾಲುಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಆ ಕಾಮಗಾರಿಗಳನ್ನು ಮತ್ತು ಉದ್ಯೋಗ ಖಾತರಿ ಯೂಜನೆಗಳನ್ನು ಪರಿಸೀಲಿಸಬೇಕು ಮತ್ತು ಗ್ರಾಮಗಳಲ್ಲಿ ಗ್ರಾಮ ಪಂಚಾಯತ ಸದಸ್ಯರು ಮತ್ತು ಟಾಸ್ಕಪೊರ್ಸ ಕಮಿಟಿಯವರೆ ಜವಾಬ್ದಾರಿಯಿಂದ ಗ್ರಾಮದ ಜನರಲ್ಲಿ ಸೌಜನ್ಯದಿಂದ ನಡೆದುಕೊಂಡು ಕೊರೋನಾ ನಿಯಮಾವಳಿಗಳನ್ನು ಪಾಲಿಸಬೇಕು.ಪೋಲಿಸರಿಂದಲೆ ಮಾಡಿಸಬಾರದು . ತಾಲೂಕಾ ಮಟ್ಟದ ಅಧೀಕಾರಿಗಳು ಮತ್ತು ಪಂಚಾಯತ ಶಿಬ್ಬಂದಿಗಳು ಪಿಡಿಓ ಗಳು ರಜೆಯ ಮೇಲೆ ಯಾರೂ ಹೊಗಬಾರದು ಕಡ್ಡಾಯವಾಗಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು. ತಾಲೂಕಿನ ಯರಝರ್ವಿ ಬುದಿಗೊಪ್ಪ ಗಳ ಪಿಎಚ್‌ಸಿ ಗಳಿಂದ ವರ್ಗಾವಣಿಯಾದ ವೈದ್ಯರನ್ನು ಪುನಃ ಅಲಿಯೇ ಕಾರ್ಯನಿರ್ವಹಿಸುವಂತೆ ಆದೇಶ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಾಶಾಂತ ಬಿ ಪಾಟೀಲ. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ ಸಿಪಿಐ ಮಂಜುನಾಥ ನಡುವಿನಮನಿ. ತಾಲೂಕಾ ವೈಧ್ಯಾದಿಕಾರಿ ಡಾಕ್ಟರ ಮಹೇಶ ಚೀತ್ತರಗಿ.ಸಂಗನಗೌಡಾ ಹಂದ್ರಾಳ. ಸೇರಿದಂತೆ ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply