Belagavi

ಸರ್ಕಾರಿ ನೌಕರರಿಗೆ ಅಗತ್ಯ ಸೌಲಭ್ಯ ಒದಗಿಸಲು ಆಗ್ರಹ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಗೋಕಾಕ: ಕೊರೊನಾ ವಾರಿಯರ್ಸ್ ಅಂತಾ ಕೆಲಸ ನಿರ್ವಹಿಸುತ್ತಿರುವ ತಾಲೂಕಿನ ಸರ್ಕಾರಿ ನೌಕರÀರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಬುಧವಾರದಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದಿಂದ ತಹಶೀಲದಾರ ನವೀನ ಹುಲ್ಲೂರ ಅವರಿಗೆ ಮನವಿ ಸಲ್ಲಿಸಿದರು.
ಕೊರೊನಾ ಮೊದಲ ಅಲೆ ಬಂದಾಗ, ಕೋವಿಡ್ ಕಾರ್ಯದಲ್ಲಿ ಸರ್ಕಾರಿ ನೌಕರÀರು ಭಾಗವಹಿಸಿ ಸಮರ್ಪಕವಾಗಿ ಕೆಲಸ ನಿರ್ವಹಿಸಿರುತ್ತಾರೆ. ಈಗ, ಅಬ್ಬರದ ಎರಡನೇ ಅಲೆಯು ತೀವ್ರಗತಿಯಲ್ಲಿ ಹರಡುತ್ತಿರುವ ಸಂದರ್ಭದಲ್ಲಿಯೂ ಕೂಡ ಸರ್ಕಾರಿ ನೌಕರರು ಕೊರೊನಾ ವಾರಿಯರ್ಸ್ ಅಂತಾ ಕಾರ್ಯನಿರ್ವಹಿಸುತ್ತಿದ್ದು, ನೌಕರರಿಗೆ ತೊಂದರೆಯಾದಾಗ ಸರಕಾರದಿಂದ ವಿಶೇಷ ಕಾಳಜಿ ವಹಿಸಬೇಕು. ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಮನೆ-ಮನೆಗಳಿಗೆ ಭೇಟಿ ಮಾಡುತ್ತಿರುವದರಿಂದ ಸದರಿಯವರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದAತೆ, ಕೋವಿಡ್ ಸುರಕ್ಷತೆಗೆ ಬೇಕಾದ ಅತೀ ಅವಶ್ಯಕ ಸಾಮಗ್ರಿಗಳಾದ ಥರ್ಮಲ್ ಸ್ಕಾö್ಯನರ್, ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಜರ್, ಪಿ.ಪಿ.ಇ. ಕಿಟ್, ಹ್ಯಾಂಡ್ ಗ್ಲೌಜ್ ಮುಂತಾದ ಸಾಮಗ್ರಿಗಳನ್ನು ನೀಡಬೇಕು.
ಕಳೆದ ವರ್ಷ ಮತ್ತು ಪ್ರಸಕ್ತ ವರ್ಷ ಕೊರೋನಾ ವಾರಿಯರ್ಸ್ಗಳಾಗಿ ಕರ್ತವ್ಯ ನಿರ್ವಹಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಿ, ಸೇವಾ ಪುಸ್ತಕದಲ್ಲಿ ದಾಖಲಿಸಲು ಕ್ರಮ ವಹಿಸುವುದು. ನೌಕರರಿಗೆ ಆರೋಗ್ಯ ದೃಷ್ಟಿಯಿಂದ ಕೊರೊನಾ ಪಾಸಿಟಿವ್ ಆದಾಗ ಸೂಕ್ತ ಚಿಕಿತ್ಸೆಗೆ ಶೀಘ್ರ ವ್ಯವಸ್ಥೆ ಮಾಡುವುದು. ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರು, ಮಾರಣಾಂತಿಕ ಕಾಯಿಲೆ ಇರುವ ನೌಕರರು, ಗರ್ಭಿಣಿ ಹಾಗೂ ಚಿಕ್ಕಮಕ್ಕಳನ್ನು ಹೊಂದಿರುವ ನೌಕರರು, ಅಂಗವಿಕಲ ನೌಕರರಿಗೆ ಕೋವಿಡ್ ಕರ್ತವ್ಯದಿಂದ ವಿನಾಯ್ತಿ ನೀಡಬೇಕು. ಕೋವಿಡ್ ಕರ್ತವ್ಯದಲ್ಲಿ ನಿರತರಾದ ಸರ್ಕಾರಿ ನೌಕರರಿಗೆ ಗುರುತಿನ ಚೀಟಿ ನೀಡುವುದು. ಸರ್ಕಾರಿ ನೌಕರರು ಕೋವಿಡ್ ಸಮೀಕ್ಷೆ ಮುಂತಾದ ಕಾರ್ಯನಿರ್ವಹಿಸುತ್ತಿರುವುದರಿಂದ ಅಂಥ ನೌಕರರಿಗೆ ಸರ್ಕಾರದಿಂದ ಬರುವ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು. ಕೊರೊನಾ ವಾರಿಯರ್ಸ್ಗಳಿಗೆ ೨೪*೭ ನಿರಂತರ ಕೆಲಸ ನೀಡದೇ ನಿರ್ದಿಷ್ಟ ಸಮಯ ನಿಗದಿ ಪಡಿಸಿ ಪಾಳೆ ಪ್ರಕಾರ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಿ.ಆರ್.ಮುರಗೋಡ, ಕಾರ್ಯದರ್ಶಿ ಕೃಷ್ಣಕುಮಾರ ಎಸ್.ಕೆ. ಸಂಘಟನಾ ಕಾರ್ಯದರ್ಶಿ ಎಸ್.ಬಿ.ಕಟ್ಟಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಮ್.ಕೆ.ಪಾಟೀಲ, ಎನ್.ಟಿ.ಬಡವನ್ನಿ, ಆರ್.ಎಮ್.ಅಗಳನ್ನವರ ಸೇರಿದಂತೆ ಅನೇಕರು ಇದ್ದರು.


Leave a Reply