Belagavi

ಕೋವಿಡ್ ಲಸಿಕಾ ಪಡೆಯುತ್ತಿರಾ, ಹಾಗಾದರೆ ಲಸಿಕಾ ಕೇಂದ್ರದಲ್ಲಿ ಈ ನಿಯಮ ಅನುಸರಿಸಿ


ಬೆಳಗಾವಿ: ಕೋವಿಡ್ 19 ಸಾಂಕ್ರಾಮಿಕ ರೋಗ  ಹರಡದಂತೆ ಕರ್ನಾಟಕ ಸರ್ಕಾರ ಲಾಕಡೌನ ಸಂದರ್ಭದಲ್ಲಿ ಲಸಿಕಾ ಕೇಂದ್ರಗಳಲ್ಲಿ ಮಾರ್ಗಸೂಚಿ ಅನುಸರಿಸಿಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು  ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಲಾಕಡೌನ ಕಠಿಣ ನಿರ್ಧಾರವನ್ನು ಸಾರ್ವಜನಿಕರು ಪಾಲಿಸಬೇಕು. ಇದೇ ಸಂದರ್ಭದಲ್ಲಿ ಸೊಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೋವಿಡ್ ಲಸಿಕೆಯನ್ನು ಆದ್ಯತೆಯ ಜನರು ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ನೀಡುವುದು ಅವಶ್ಯವಾಗಿದೆ, ಆದ ಕಾರಣ ಸಾರ್ವಜನಿಕರು  ಲಸಿಕಾ ಕೇಂದ್ರಗಳಿಗೆ ಹೋಗುವ ಮೊದಲು ಈ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದರು.

ಲಸಿಕಾ ಕೇಂದ್ರ ಅನುಸರಿಸುವ ನಿಯಮಗಳು:

ಶಹರ ಪ್ರದೇಶದಲ್ಲಿ 45 ವರ್ಷ ಮೇಲ್ಪಟ್ಟ ಜನರು  cowin.gov.in ಮತ್ತು ಆರೋಗ್ಯ ಸೇತು(APP)  ನಲ್ಲಿ  ಸ್ವಯಂ ನೊಂದಣಿ  ಮಾಡಿ, ನಂತರ ಒಂದು ಸಂದೇಶ ಬರುವುದು ಮತ್ತು ಭಾವಚಿತ್ರ ಬರುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಬೇಕು.

ಗ್ರಾಮೀಣ ಪ್ರದೇಶದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಲಸಿಕಾ ಕೇಂದ್ರಗಳ ಶುಶ್ರೂಷಕರು, ಕಿರಿಯ ಮಹಿಳಾ ಸಹಾಯಕಿಯರು ಅಥವಾ ವೈದ್ಯಾಧಿಕಾರಿಯ ರುಜು ಮಾಡಲ್ಪಟ್ಟ ಪಾಸಗಳನ್ನು ಲಸಿಕಾ ಕೇಂದ್ರಗಳಿಗೆ ಬರುವ ಸಾರ್ವಜನಿಕರಿಗೆ ನೀಡಬೇಕು.

2 ನೇ ಡೋಸ್ ಗೆ ಬರುವವರು ಮೊದಲನೇ ಡೋಸ್ ನ ಪ್ರಮಾಣ ಪತ್ರ ಅಥವಾ ಸಂದೇಶ ಬಂದಿದ್ದಲ್ಲಿ ಅದನ್ನು ತೆಗೆದುಕೊಂಡು ಬರುವುದು. ಪಂಚಾಯಿತಿಯವರು ಆದ್ಯತೆಯ ಜನರಿಗೆ ಲಸಿಕಾ ಕೇಂದ್ರಗಳಿಗೆ ಹೋಗಲು ವಾಹನ ವ್ಯವಸ್ಥೆ ಮಾಡುವವರು.

ಲಸಿಕೆ ಪಡೆಯುವ ಸಂದರ್ಭದಲ್ಲಿ ಕೋವಿಡ್ ಕಾರ್ಯಕ್ರಮದ ಸೂಕ್ತ ನಡುವಳಿಗಳನ್ನು  ಪಾಲಿಸಬೇಕು. ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು, ಹಾಗೂ 5-10 ಜನರು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಎನ್.ಎಸ್.ಎಸ್, ಎನ್.ಸಿ.ಸಿ ಪೊಲೀಸ್ ಸಹಾಯ ಪಡೆದುಕೊಂಡು ಲಸಿಕಾ ಕೇಂದ್ರದಲ್ಲಿ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು.

ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಆದೇಶದಲ್ಲಿ ವಿಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಸೂಚಿಸಿದರು.


Leave a Reply