State

ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸದಂತೆ ವೇತನ ಕಡಿತಗೊಳಿಸದಂತೆ ಮನವಿ


ಬೆಳಗಾವಿ:  ಕೋವಿಡ್ 19 ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಜನತಾ ಕರ್ಫ್ಯೂ ಸರಕಾರ ಘೋಷಿಸಿದ್ದು ಈ ಕರ್ಪ್ಯು ಅವಧಿಯಲ್ಲಿ ಉದ್ಯೋಗದಾತರು ತನ್ನ ಉದ್ಯೋಗಸ್ಥ ರನ್ನ ಕರ್ತವ್ಯದಿಂದ ತೆಗೆದು ಹಾಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಯಾವುದೇ ಉದ್ಯೋಗದಾತರು ತನ್ನ ಉದ್ಯೋಗಸ್ಥ ರನ್ನ ಕರ್ಫ್ಯೂ ಅವಧಿಯಲ್ಲಿ ಕೆಲಸದಿಂದ ವಜಾಗೊಳಿಸ ದಿರಲು ಹಾಗೂ ಅವರಗಳ ವೇತನವನ್ನು ಕಡಿತಗೊಳಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪಿ ರವಿಕುಮಾರ್ ಮನವಿ ಮಾಡಿದ್ದಾರೆ. ಕೋವಿಡ್ 19 ರ ಪ್ರಕರಣಗಳ ಸಂಖ್ಯೆ ಹಾಗೂ ಕೋವಿಡ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದನ್ನು ಗಮನಿಸಿದ ಸರಕಾರವು ಪ್ರಸರಣದ ಸರಪಳಿಯನ್ನು ತುಂಡರಿಸಲು ಅತ್ಯಂತ ಕಠಿಣ ನಿರ್ಬಂಧಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಕಂಡುಬAದಿದೆ ಹಾಗೂ ಏಪ್ರಿಲ್ 26ರಿಂದ ಮೇ 12ರ ವರೆಗೆ ಜನತಾ ಕರ್ಫ್ಯೂ ಘೋಷಿಸಿದೆ.

ಅಲ್ಲದೆ ಇಂತಹ ದುಸ್ಥಿತಿಯಲ್ಲಿ ಹಲವು ಭೂಮಾಲೀಕರು, ಮನೆ ವಸತಿ, ಅಂಗಡಿ ಮಾಲೀಕರು, ಬಾಡಿಗೆ ಆಧಾರದ ಮೇಲೆ ಇರುವ ಸ್ಥಳಗಳು ಗೃಹಗಳನ್ನು ಬಾಡಿಗೆದಾರರು ತೆರವುಗೊಳಿಸುವ ಕ್ರಮಕ್ಕೆ ಮುಂದಾಗಿರುವದು ಗಮಕ್ಕೆ ಬಂದಿರುತ್ತದೆ. ಮನೆ ಮಾಲೀಕರು ಮನೆಗಳನ್ನು, ಪಿಜಿ, ಅಂಗಡಿಗಳನ್ನು ಬಾಡಿಗೆ ಅಥವಾ ಭೋಗ್ಯದ ಆಧಾರದ ಮೇಲೆ ನೀಡಿರುವ ಮೆಲ್ಕಂಡವರ ಸರದಿ ವಾಸದಿಂದ ಬಲವಂತವಾಗಿ ತೆರವುಗೊಳಿಸದಿರಲುಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪಿ ರವಿಕುಮಾರ್ ಮನವಿ ಮಾಡಿದ್ದಾರೆ.


Leave a Reply