BengalurukaranatakaState

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಬಂಧನ


ಜಂಗಲ್ bet.com ಆಫ್ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರನ್ನು ಹೊಸಕೋಟೆಯ ಉಪ ವಿಭಾಗದ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೋಟೆ ತಾಲೂಕಿನ ಅತ್ತಿ ವಟ್ಟ ಗೇಟ್ ಬಳಿ ಶ್ರೀ ಬಾಲಾಜಿ ಎಂಟರ್ಪ್ರೈಸಸ್ ಬಳಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ವೇಳೆ ಬಂಧಿಸಿದ್ದಾರೆ. ಹೊಸಕೋಟೆ ನಗರದ ಸಂದೀಪ್. ತಾಲೂಕಿನ ನಂದಗುಡಿ ಹೋಬಳಿ ತಾವರೆಕೆರೆ ಗ್ರಾಮದ ಶ್ರೀಕಾಂತ್ ಬಂಧಿತ ಆರೋಪಿಗಳು.

ಆರ್ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯಾವಳಿಯ ಬೆಟ್ಟಿಂಗ್ ನಲ್ಲಿ ತೊಡಗಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಜಂಗಲ್ bet.com ಆಪ್ ಮೂಲಕ ರೇಶ್ಯವನ್ನು ನೋಡಿಕೊಂಡು ವಾಟ್ಸಪ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಫೋನ್ ಪೇ ಗೂಗಲ್ ಪೆ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡು ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಳ್ಳುತ್ತಿದ್ದು ಕಂಡುಬಂದಿದೆ.

ಬಂಧಿತರಿಂದ ಒಂದು ಲ್ಯಾಪ್ಟಾಪ್. 4 ಮೊಬೈಲ್ ಫೋನ್. 57.500 ನಗದು ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಉಮಾಶಂಕರ್. ಸಿಪಿಐ ಶಿವರಾಜ್. ಪಿಎಸ್ಐ ಸಿಎಂ ರಾಜು. ಸೇರಿದಂತೆ ಸಿಬ್ಬಂದಿವರ್ಗ ಭಾಗವಹಿಸಿದ್ದು ರವಿ ಡಿ ಚೆನ್ನಣ್ಣನವರ್. ಎಎಸ್ಪಿ ಲಕ್ಷ್ಮಿ ಗಣೇಶ್ ಅಭಿನಂದಿಸಿದ್ದಾರೆ.


Leave a Reply