karanatakaState

ಲಿಂಬೆರಸದ ಚಿಕಿತ್ಸೆ ಕುರಿತು ಸಂಸದ ಪ್ರತಾಪ ಸಿಂಹ ಹೇಳಿದ್ದೇನು..?


ಮೈಸೂರು: ಕಳೆದೆರೆಡು ದಿನಗಳಿಂದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಹೇಳಿದ ಲಿಂಬೆರಸದ ಚಿಕಿತ್ಸೆ ಬಾರಿ ಸದ್ದು ಮಾಡುತ್ತಿದ್ದು  ಹೇಳಿಕೆಯನ್ನು ಇಂದು ಸಂಸದ ಪ್ರತಾಪ್ ಸಿಂಹ ಸಮರ್ಥನೆ ಮಾಡಿಕೊಂಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು  ಮೂಗಿಗೆ ಎರಡು ಹನಿ ಲಿಂಬೆ ರಸ ಹಾಕಿದರೆ ದೇಹದಲ್ಲಿರುವ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಹೇಳಿಕೆ ನೀಡಿದ್ದಾರೆ. ಆದರೆ ಅವರೇನೂ ನಿಂಬೆಹಣ್ಣಿನ ರಸ ಕೊರೊನಾಗೆ ಮೆಡಿಸನ್ ಎಂದು ಹೇಳಿದ್ದಾರಾ?. ದೇಹದ ಕಫಾ ತೆಗೆಯಲು ನಿಂಬೆಹಣ್ಣಿನ ರಸ ಸಹಕಾರಿ ಎಂದು ಹೇಳಿದ್ದಾರೆ, ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

“ವಿಜಯ ಸಂಕೇಶ್ವರ್ ಅವರ ಬಗ್ಗೆ ಮಾತಾಡುವ ಮುನ್ನಾ ಮಾತಾಡುವವರು ತಮ್ಮ ಯೋಗ್ಯತೆ ಏನೆಂದು ನೋಡಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.

 


Leave a Reply