BengalurukaranatakaState

ಕೋವಿಡ್ ನಿಯಂತ್ರಣಕ್ಕೆ ಗೃಹ ಇಲಾಖೆಯಿಂದ ಮತ್ತಷ್ಟು ಕಠೀಣ ಕ್ರಮ: ಬೊಮ್ಮಾಯಿ


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಾಖಲೆಯತ್ತ ಸಾಗುತ್ತಲೇ ಇದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು ನಿಯಂತ್ರಣಕ್ಕಾಗಿ ಸರಕಾರ 14 ದಿನಗಳ ಜನತಾ ಕರ್ಪ್ಯೂ ಜಾರಿ ಮಾಡಿದೆ. ಗೃಹ ಇಲಾಖೆ ಕೂಡ ಕೊರೊನಾ ನಿರ್ವಹಣೆ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ 5 ಜನ ಎಡಿಜಿಪಿಗಳನ್ನು ನೇಮಕ ಮಾಡಲಾಗಿದೆ. ಕೋವಿಡ್ ಕೆಲಸಕ್ಕಾಗಿ ಗೃಹ ಇಲಾಖೆಯಿಂದ 8,500 ಹೋಮ್ ಗಾರ್ಡ್ ಗಳ ನಿಯೋಜನೆ ಮಾಡಲಾಗಿದೆ ಎಂದರು.

ವಿಶೇಷವಾಗಿ ಬೆಂಗಳೂರಿನಲ್ಲಿ 15,000 ಸಿವಿಲ್ ಡಿಫೆನ್ಸ್ ಸ್ವಯಂ ಸೇವಕ ಸಿಬ್ಬಂದಿಗಳನ್ನು ಪ್ರತಿ ವಾರ್ಡ್ ಗಳಲ್ಲಿ ಟ್ರ್ಯಾಕಿಂಗ್, ಟ್ರೇಸಿಂಗ್ ಹಾಗೂ ಹೋಂ ಐಸೋಲೇಷನ್ ಗಳ ಕೋವಿಡ್ ಕೆಲಸಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ವಾರ್ಡ್ ಗಳ ಸ್ವಚ್ಛತೆಗೆ ಆದೇಶ ನೀಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಎಲ್ಲಾ ಜೈಲುಗಳಲ್ಲಿ ಸ್ಯಾನಿಟೈಸ್ ಸ್ಪ್ರೇ ಮಾಡಲಾಗುವುದು. 300 ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲರನ್ನೂ ಐಸೋಲೇಟ್ ಮಾಡಲಾಗಿದೆ ಎಂದು ತಿಳಿಸಿದರು.


Leave a Reply