Koppal

ಕರೋನಾ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಿಗೆ ಬೇಟಿ ನೀಡಿದ ತಾಲೂಕ ಮಟ್ಟದ ಅಧಿಕಾರಿಗಳು


ಕುಷ್ಠಗಿ:ಎರಡನೇ ಹಂತದ ಕರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ತಹಶೀಲ್ದಾರ ಸಿದ್ದೇಶ ಎಂ,ತಾಪಂ ಇಓ.ಕೆ ತಿಮ್ಮಪ್ಪ,ತಾಲೂಕ ಆರೋಗ್ಯ ಅಧಿಕಾರಿ ಆನಂದ ಗೋಟೂರು,ಹಾಗೂ ಇನ್ನಿತರ ಅಧಿಕಾರಿಗಳು ಇಂದು ದೋಟಿಹಾಳ,ಮುದೇನೂರ,ಬೆಂಚಮಟ್ಟಿ, ಮಾದಾಪುರ ಗ್ರಾಮಗಳಿಗೆ ತೆರಳಿ ಪ್ರಾಥಮಿಕ ಸಂಪರ್ಕಿತರನ್ನು ತೀವ್ರವಾಗಿ ಪತ್ತೆಹಚ್ಚಿ ಪರೀಕ್ಷಿಸಲು ಸೂಚಿಸಿ ಮನೆಯಿಂದ ಹೊರಬರದಂತೆ ಸೂಚಿಸಿದರು. ಅನಾವಶ್ಯಕ ವಾಗಿ ಯಾರು ಹೊರಗಡೆ ಬರಬೇಡಿ, ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು.ವಿನಾ ಕಾರಣ ಹೊರಗಡೆ ಬಂದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವದು ಎಂದು ತಹಶೀಲ್ದಾರ ಸಿದ್ದೇಶ ಎಂ ಹೇಳಿದರು.ತಾಲೂಕ ಆರೋಗ್ಯ ಅಧಿಕಾರಿ ಮಾತನಾಡಿ ನೆಗಡಿ,ಕೆಮ್ಮು,ಜ್ವರ ಸೇರಿ ಇತರ ರೋಗ ಲಕ್ಷಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆ ಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು ಎಂದರು.ತಾಪಂ ಇಓ ಮಾತನಾಡಿ,ಗ್ರಾಮ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸದಸ್ಯರು ಹಾಗೂ ಅಂಗನವಾಡಿ,ಆಶಾ ಕಾರ್ಯ ಕರ್ತೆಯರು ಉಪಸ್ಥಿತರಿದ್ದರು.


Leave a Reply