Belagavi

ರೆಮಿಡಿಸಿವಿರ್ ಬಳಕೆ-ಜಿಲ್ಲಾಡಳಿತದಿಂದ ಆಡಿಟ್: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್


ಬೆಳಗಾವಿ, ಏ.೨೯: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ರೆಮಿಡಿಸಿವಿರ್ ಕುರಿತು ಜಿಲ್ಲಾಡಳಿತದಿಂದ ಆಡಿಟ್ ಮಾಡಲು ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆಗೆ ರೆಮಿಡಿಸಿವಿರ್ ಬಳಕೆ ಜಾಸ್ತಿಯಾದ ಪರಿಣಾಮ ಕೆಲವೆಡೆ ಕೊರತೆ ಉಂಟಾಗಿರುತ್ತದೆ. ಇದರಿಂದಾಗಿ ಅಕ್ರಮ ಮಾರಾಟ ಪ್ರಕರಣಗಳು ಕೂಡ ವರದಿಯಾಗಿರುತ್ತವೆ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಅಗತ್ಯತೆ ಆಧರಿಸಿ ರೆಮಿಡಿಸಿವಿರ್ ಬಳಕೆ ಮಾಡಿರುವುದು ಹಾಗೂ ಬಳಕೆಯಾಗಿರುವ ರೆಮಿಡಿಸಿವಿರ್ ಪ್ರಮಾಣದ ಕುರಿತು ತಜ್ಞ ವೈದ್ಯರನ್ನು ಒಳಗೊಂಡ ಸಮಿತಿಯು ಆಡಿಟ್ ನಡೆಸಲಿದೆ.
ಜಿಲ್ಲೆಯ ಆಯಾ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಆಡಿಟ್ ಸಮಿತಿ ರಚಿಸಲಾಗಿದ್ದು, ಅವರ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ ರೆಮಿಡಿಸಿವಿರ್ ಬಳಕೆ ಕುರಿತು ಅವರು ಆಡಿಟ್ ನಡೆಸಲಿದ್ದಾರೆ.
ಆದ್ದರಿಂದ ಸರಕಾರದ ಮಾರ್ಗಸೂಚಿ ಆಧರಿಸಿ ಅತ್ಯಗತ್ಯ ಸಂದರ್ಭಗಳಲ್ಲಿ ರೆಮಿಡಿಸಿವಿರ್ ಬಳಸಬೇಕು ಮತ್ತು ಅದಕ್ಕೆ ಸಂಬAಧಿಸಿದAತೆ ಎಲ್ಲ ಮಾಹಿತಿಯನ್ನು ಕಾಯ್ದಿರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಆಸ್ಪತ್ರೆಗಳಿಗೆ ತಿಳಿಸಿದ್ದಾರೆ.


Leave a Reply