Belagavi

ಬೈಲಹೊಂಗಲ ತಾಲೂಕಿನಲ್ಲಿ ರೈತನ ಬದುಗೆ ಬಲ ತುಂಬಿದ ಜಲಾಮೃತ


ಬೈಲಹೊಂಗಲ ೨೯: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆಯ ಜಲಾಮೃತ ಕರ‍್ಯಕ್ರಮದಲ್ಲಿ ತಾಲೂಕಿನ ೧೧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಲಶಕ್ತಿ ಅಭಿಯಾನ ಪ್ರಯುಕ್ತ (ಛಿಚಿಣಛಿh ಣhe ಡಿಚಿiಟಿ) ಮಳೆ ನೀರನ್ನು ಹಿಡಿದಿಡುವ ಉದ್ದೇಶಕ್ಕಾಗಿ “ ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ ಮತ್ತು ನಿಂತ ನೀರನ್ನು ಭೂಮಿಯಲ್ಲಿ ಇಂಗಿಸುವಂತೆ” ಮಾಡುವುದಕ್ಕಾಗಿ ರೈತರ ಹೊಲಗಳಲ್ಲಿ ಬದು ನರ‍್ಮಾಣಗಳು ಹಾಗೂ ಹಳ್ಳಗಳನ್ನು ಹೂಳೆತ್ತುವ ಮೂಲಕ ಕರ‍್ಯಕ್ರಮವನ್ನು ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಾ.ಪಂ. ಕಾರ್ಯನಿರ್ವಾಹಲ ಅಧಿಕಾರಿ ಸುಭಾಷ ಸಂಪಗಾAವಿ ತಿಳಿಸಿದರು.
ಪ್ರಸಕ್ತ ರ‍್ಷದಲ್ಲಿ ಜಲಾಮೃತ ಕಾಮಗಾರಿ ಪ್ರಾರಂಭಿಸಿರುವ ಗ್ರಾಮ ಪಂಚಾಯತಿಗಳು ಹಣಬರಹಟ್ಟಿ, ಮೇಕರ‍್ಮಡಿ, ಮಲ್ಲಾಪೂರ ಕೆಎನ್, ವಣ್ಣೂರ, ಭಾಂವಿಹಾಳ, ಅಮಟೂರ, ಬೆಳವಡಿ, ಬುಡರಕಟ್ಟಿ, ಹೊಳಿನಾಗಲಾಪೂರ, ತಿಗಡಿ ಮತ್ತು ಮರಡಿನಾಗಲಾಪೂರ ಗ್ರಾಮಗಳಲ್ಲಿ ಕಾಮಗಾರಿ ಆರಂಭಗೊAಡಿವೆ. ಪ್ರತಿ ೧ ಎಕರೆ ಜಮೀನಿನಲ್ಲಿ ೪*೨*೧೦ ಅಂದಾಜು ೨೦ ಕಂದಕಗಳನ್ನು ನರ‍್ಮಾಣ ಮಾಡಬಹುದು ಒಂದು ಕಂದಕದಲ್ಲಿ ಅಂದಾಜು ೨೫೦೦ ಲೀಟರ ಮಳೆಯ ನೀರನ್ನು ಸಂಗ್ರಹಿಸಬಹುದು ಇದರಿಂದ ೧ ಎಕರೆಯಲ್ಲಿ ಅಂದಾಜು ೫೦,೦೦೦ ಸಾವಿರ ಲೀಟರ ನೀರನ್ನು ಸಂಗ್ರಹಿಸಬಹುದಾಗಿದೆ.
ಸದರಿ ಕಾಮಗಾರಿಗಳಿಂದ ರೈತರ ಜಮೀನಿಗೆ ಬದು ಆಗುವುದರಿಂದ ಮಣ್ಣು ಮತ್ತು ಸಂರಕ್ಷಣೆ ಜೊತೆಗೆ ಅಂರ‍್ಜಲ ಹೆಚ್ಚಿಸಲು ತುಂಬಾ ಸಹಕಾರಿಯಾಗಿದೆ. ಪ್ರತಿ ರೈತರು ಬದು ನರ‍್ಮಾಣಗಳ ಸದುಪಯೋಗವನ್ನು ಜಲಾಮೃತ ಕರ‍್ಯಕ್ರಮದಡಿಯಲ್ಲಿ ಅಥವಾ ಗ್ರಾಮ ಪಂಚಾಯತಿಯಡಿಯಲ್ಲಿ ಪಡೆದುಕೊಂಡು ಶೇಕಡಾ ೧೫% ರಷ್ಟು ನೀರಿನ ತೇವಾಂಶ ಹಾಗೂ ಆದಾಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.
ಜಲಾಮೃತ ಕರ‍್ಯಕ್ರಮವು ತಾಲೂಕಿನಲ್ಲಿ ಯಶಸ್ವಿಯಾಗುವಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕರ‍್ಯ ನರ‍್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಜಂಟಿ ಕೃಷಿ ನರ‍್ದೇಶಕರು ಕೃಷಿ ಇಲಾಖೆ ಹಾಗೂ ಉಪಕೃಷಿ ನರ‍್ದೇಶಕರು ಮತ್ತು ತಾಲೂಕ ಮಟ್ಟದ ಅಧಿಕಾರಿಗಳ ಸಹಕಾರ ಉತ್ತಮ ರೀತಿಯಲ್ಲಿರುವುದರಿಂದ ಈ ರೀತಿಯಲ್ಲಿ ಯಶಸ್ವಿಯಾಗುತ್ತಿದೆ ಎಂದು ತಾಲೂಕ ಪಂಚಾಯತ ಕರ‍್ಯನರ‍್ವಾಹಕ ಅಧಿಕಾರಿ ಎಸ್.ಎಸ್ ಸಂಪಗಾಂವಿ ತಿಳಿಸಿ ರ‍್ಷ ವ್ಯಕ್ತಪಡಿಸಿದರು.


Leave a Reply