Koppal

ಕರೋನಾ ಹಿನ್ನೆಲೆಯಲ್ಲಿ ತಾಲೂಕ ಆಸ್ಪತ್ರೆ ಹಾಗೂ ವಿವಿಧ ಗ್ರಾಮ ಪಂಚಾಯತಿ ಗಳಿಗೆ ಶಾಸಕರ ಬೇಟಿ.


ಕುಷ್ಟಗಿ:ತಾಲೂಕ ಆಸ್ಪತ್ರೆ ಹಾಗೂ ವಿವಿಧ ಗ್ರಾಮ ಪಂಚಾಯತಿಗಳಿಗೆ ಶಾಸಕರಾದ ಅಮರೇಗೌಡ ಪಾಟೀಲ್ ಬೇಟಿ ನೀಡಿ,ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಕರೋನಾ ಮಹಾ ಮಾರಿ ಯಿಂದ ಆಸ್ಪತ್ರೆ ಗೆ ದಾಖಲಾದ ಸೊಂಕಿತರಿಗೆ ಸರಿಯಾಗಿ ವೈದ್ಯರು ಚಿಕಿತ್ಸೆ ನೀಡಬೇಕು.ಗ್ರಾಮ ಪಂಚಾಯತಿಯವರು ಕರೋನಾ ಜಾಗೃತಿ ಮೂಡಿಸಬೇಕು ಎಂದರು.ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಂಡು ಕರೋನಾ ಮಹಾ ಮಾರಿಯಿಂದ ತಪ್ಪಿಸಿಕೊಳ್ಳಬೇಕು ಎಂದರು.ಕರೋನಾ ಚಿಕಿತ್ಸೆ ಗೆ ಬೇಕಾಗುವ ಸಾಮಗ್ರಿಗಳು ಪರಿಶೀಲನೆ ಮಾಡಿದರು .ವೈದ್ಯರೊಂದಿಗೆ ಸಮಾಲೋಚನೆ ಮಾಡಿದ ಶಾಸಕರು, ಜಿಲ್ಲಾ ಆರೋಗ್ಯ ಕೇಂದ್ರಗಳಿಂದ ಬೇಕಾಗುವ ಅಗತ್ಯ ಔಷಧಿ ಗಳನ್ನು ತರಿಸಿಕೊಳ್ಳಬೇಕು ಎಂದು ಸೂಚಿಸಿದರು.ಈಗಾಗಲೇ ಸರ್ಕಾರ ಲಾಕ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಯಾರು ಅನಾವಶ್ಯಕ ವಾಗಿ ಹೊರಗಡೆ ಬರಬಾರದು ಎಂದರು.ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಆನಂದ ಗೋಟೂರು,ವೈದ್ಯರಾದ ಡಾ.ಕೆ ಎಸ್ ರಡ್ಡಿ, ಆಯಾ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿಗಳು ಸೇರಿ ಇತರರು ಉಪಸ್ಥಿತರಿದ್ದರು.


Leave a Reply