Koppal

ಕರೋನ ನಿಯಂತ್ರಣಕೆ ಜನತಾ ಕರ್ಫ್ಯೂ ಜಾರಿ : ಸಚಿವ ಬಿ. ಸಿ ಪಾಟೀಲ್ 


ಗಂಗಾವತಿ : ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಇಂದು ಭೇಟಿ ಕೊಟ್ಟು ಮಾತನಾಡಿದರು

ಸೊ೦ಕು  ಕಡಿಮೆ ಮಾಡುವುದಕ್ಕೆ ಜನತಾ ಕರ್ಫ್ಯೂ ಜಾರಿಗೆಗೊಳಿಸಲಾಗಿದೆ .

ಈಗಾಗಲೇ ಸರಪಳಿ ಶುರುವಾಗಿದೆ ಇದು ಕಟ್.ಆಗಲು 14 ರಿಂದ 16ದಿನಗಳು ಬೇಕು ಕೊಪ್ಪಳ ಜಿಲ್ಲೆಯಲ್ಲೂ ಕೊರೋನಾ ಕೇಸಸ್ ಹೆಚ್ಚುತ್ತಿವೆ.ನಿತ್ಯ 350 ರಿಂದು 400 ಕೇಸಸ್ ಬರ್ತಿವೆ.

ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್.ವೆಂಟಿಲೇಟರ್ ಬೆಡ್ ಕೊರತೆ ಆಗದಂತೆ ಇಲ್ಲಿಯವರಿಗೆ ನೋಡಿಕೊಂಡಿದೆ ಮುಂದಿನ ಪರಿಸ್ಥಿತಿ ಎದುರಿಸಲು ಜಿಲ್ಲಾ ಮತ್ತು ಆಯಾ ತಾಲೂಕು ಆಡಳಿತ ಸನ್ನದ್ದವಾಗಿದೆ

.ಸಿಎಂ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದೇನೆ ಆಯಾ ಜಿಲ್ಲೆಯ ಪ್ರಕಣಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಅವುಗಳ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಎಂ. ಪಿ ಮತ್ತು ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ

ನಂತರ ಬೇರೆ ಬೇರೆ ಊರುಗಳಿಂದ ಬಂದಿರುವ ಗ್ರಾಮೀಣ ಭಾಗದ ಜನರನ್ನು ಇದುವರೆಗೂ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅಶಾ ಕಾರ್ಯಕರ್ತೆಯರು ಪಿಡಿಓ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಭಾಗದ ಜನರ ಕೋವಿಡ ಟೆಸ್ಟ್‌ ಮಾಡಿಸಬೇಕು ಜನರು ಜಾಗೃತಿಯಾಗಬೇಕು.

ಈಗಾಗಲೇ ಜಿಲ್ಲೆಯ 1655 ಜನರನ್ನು ಹೋಮ್ ಐಸೋಲೇಷನ್ ಮಾಡಲಾಗಿದೆ.ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಶಾಸಕರಾದ ಪರಣ್ಣ ಮುನವಳ್ಳಿ ರಾಘವೇಂದ್ರ ಇಟ್ನಾಳ ಕಾಡಾ.ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಸವಡಿ ಸೇರಿದಂತೆ ಇತ್ತರರು ಇದ್ದರು

(ಹನುಮೇಶ್ ಬಟಾರಿ)


Leave a Reply