Bengalurukaranataka

ಸರಕಾರ ಹೇಳುವವರೆಗೂ ಲಸಿಕೆ ಹಾಕಿಸಿಕೊಳ್ಳಲು ಬರಬೇಡಿ: ಸಚಿವ ಸುಧಕಾರ್


ಬೆಂಗಳೂರು: ಮೇ.1 ರಿಂದ ಆರಂಭವಾಗಬೇಕಿದ್ದ ಲಸಿಕೆ ಕಾರ್ಯಕ್ರಮಾಕ್ಕೆ  ಕೋವಿಶೀಲ್ಡ್ , ಕೋವ್ಯಾಕ್ಸಿನ್ ತಯಾರಿಸುವ ಕಂಪನಿಗಳಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ, ನಾಳೆ 18-44 ವರ್ಷದವರು ಸರ್ಕಾರದಿಂದ ಅಧಿಕೃತ ಮಾಹಿತಿ  ನೀಡುವವರೆಗೂ ಯಾರು ಆಸ್ಪತ್ರೆ ಬಳಿ ಹೋಗಬಾರದು ಎಂದು ಸಚಿವ ಸುಧಕಾರ್ ಮನವಿ ಮಾಡಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಮ್ಮ ಸದಾಶಿವನಗರದ ನಿವಾಸದ ಎದುರು ಬೀದರ್ ಮತ್ತು ಕಲ್ಬುರ್ಗಿ ಜಿಲ್ಲೆಗಳ ಕೋವಿಡ್ ಸಂಬಂಧಿತ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಮಧ್ಯಮಾಗಳೊಂದಿಗೆ ಮತನ್ನಾಡಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನ ಲಸಿಕೆ ಕೊಡುತ್ತೇವೆ, ಅಂದಾಜು 3-3.5 ಕೋಟಿ 18 ವರ್ಷ ಮೇಲ್ಪಟ್ಟವರು ಇದ್ದಾರೆ ಎಂದು ಮಾಹಿತಿ ನೀಡಿದರು.

1 ಕೋಟಿ ಡೋಸ್‌ಗೆ ಕೋವಿಶೀಲ್ಡ್ ಲಸಿಕೆಗೆ ಆರ್ಡರ್ ಮಾಡಲಾಗಿದೆ,  ಸೀರಂ ಇನ್ಸ್ಟಿಟ್ಯೂಟ್ 1 ತಿಂಗಳಲ್ಲಿ 5-6 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ ಎಂದು ಹೇಳಿದರು.

ಭಾರತ್ ಬಯೋಟೆಕ್ 1-1.5 ಕೋಟಿ ಡೋಸ್ ಉತ್ಪಾದನೆ ಮಾಡುತ್ತಿದೆ, ರಷ್ಯಾದ ಸ್ಪುಟ್ನಿಕ್ ಕೂಡಾ ರಾಜ್ಯಕ್ಕೆ ಬರುತ್ತಿದೆ. ಕೋವಿನ್ ಪೋರ್ಟ್‌ಲ್ಲಿನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ಮೊದಲು ನೀಡಲಾಗುತ್ತದೆ ಎಂದರು.

ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಮಾಧ್ಯಮದವರ ಪ್ರೆಶ್ನೆಗಳಿಗೆ ನನ್ನ ಗಮನಕ್ಕೆ  ಬಂದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹಾರಿಕೆಯ ಉತ್ತರ ನೀಡಿದರು.

ನಿನ್ನೆ ರಾಜ್ಯದಲ್ಲಿ ಕರ್ಫ್ಯೂ ಉಲ್ಲಂಘನೆ ಪ್ರಕರಣಗಳ ವಿಚಾವಾಗಿ ಕೇಳಿದ ಪ್ರೆಶ್ನೆಗಳಿಗೆ ಎಂತೆತವರೇ ಸಾಯುತ್ತಿದ್ದಾರೆ ನೋಡುತ್ತಾ ಇದ್ದೀರಿ, ಜನ ತಮ್ಮ‌ ತಮ್ಮ ಜವಬ್ದಾರಿಯನ್ನು ಅರಿತು ನಿಯಮಗಳ ಪಾಲನೆ ಮಾಡಬೇಕು ಎಂದು ಹೇಳಿದರು.

ಜನರ ಕಷ್ಟದ ಬಗ್ಗೆ ತೋರಿಸುತ್ತಿದ್ದೀರಾ, ಮಾರ್ಗಸೂಚಿಯನ್ನು ಸರ್ಕಾರ ಕೊಡುತ್ತಿದೆ ಜವಾಬ್ದಾರಿ ಅರಿತು ವರ್ತಿಸಿ ಎಂದು ಜನರಿಗೆ ಸುಧಾಕರ್ ಮನವಿ ಮಾಡಿದರು.

ನಾನು ಲಸಿಕೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮದ ದಿನಾಂಕಗಳನ್ನು ಹೇಳೋದಕ್ಕೆ ಹೋಗೋದಿಲ್ಲ, ಸರ್ಕಾರಕ್ಕೆ ಅಂದಾಜು ಮಾಡಲು ಇನ್ನೂ ಆಗಿಲ್ಲ ಅಧಿಕೃತವಾಗಿ ಮಾಹಿತಿ ಹಂಚಿಕೊಂಡ ಮೇಲೆ ರಾಜ್ಯದ ಜನರಿಗೆ ಮಾಹಿತಿ ತಿಳಿಸುತ್ತೇನೆ ಎಂದರು. ನಮ್ಮ ಸತತ ಪ್ರಯತ್ನ ಮುಂದುವರೆದಿದೆ ಎಂದು ಆಶ್ವಾಸನೆ ಕೊಟ್ಟರು.

44 ವರ್ಷದವರಿನ ಜನರಿಗೆ ಎಷ್ಟು ಲಸಿಕೆ ಬೇಕಿದೆ ಎಂದು ಅಂದಾಜಿಸುತ್ತಿದ್ದೇವೆ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ಕೊಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದೇವೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಇಲ್ಲಿಯವರೆಗೂ ಲಸಿಕೆ ಕೊಡುತ್ತಿರೋದನ್ನ ಮುಂದುವರೆಸಬಹುದು, ಈಗಾಗಲೇ 45 ವರ್ಷ ಮೇಲ್ಪಟ್ಟ 99 ಲಕ್ಷದ ಜನರಲ್ಲಿ 95 ಲಕ್ಷ ಲಸಿಕೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

1.4 ಪರ್ಸೆಂಟ್ ಲಸಿಕೆ ವೇಸ್ಟ್ ಆಗಿದೆ, ಕೇಂದ್ರ ಸರ್ಕಾರಕ್ಕೆ ಇನ್ನೂ ಹೆಚ್ಚು ಲಸಿಕೆಗೆ ಮನವಿ ಮಾಡುತ್ತಿದ್ದೇವೆ ಈಗಾಗಲೇ 6 ಲಕ್ಷ ಡೋಸ್ ದಾಸ್ತಾನು ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.


Leave a Reply