BengaluruState

ಬೆಡ್ ಇಲ್ಲವೆಂಬ ಭಯಬೇಡ, ಕೋವಿಡ್ ಸೋಂಕಿತರಿಗೆ ಸಿಹಿ ಸುದ್ದಿ


ಬೆಂಗಳೂರು : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಕೊರೊನಾ ಸೊಂಕಿತರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, RT-PCR ಮತ್ತು Rapid ಆಂಟಿಜನ್ ಪರೀಕ್ಷೆಯಲ್ಲಿ ನಗೆಟಿವ್ ಬಂದು ಕೊರೊನಾ ಸೋಂಕಿನ ಲಕ್ಷಣ ಕಾಣಿಸುತ್ತಿರುವವರಿಗೂ ಸರ್ಕಾರದಿಂದ ಬೆಡ್ ನಿಡಿ ಚಿಕಿತ್ಸೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಆರ್ ಟಿ-ಪಿಸಿಆರ್ & ರ‍್ಯಾಪಿಡ್ ಆಂಟಿಜೆನ್ ಎರಡೂ ರೀತಿಯ ಪರೀಕ್ಷೆಗಳಲ್ಲಿ ಕೋವಿಡ್ ಲಕ್ಷಣಗಳಿದ್ದರೂ ನೆಗೆಟಿವ್ ವರದಿ ಕಂಡು ಬರುತ್ತಿರುವುದರಿಂದ ಅಂತಹ ಪ್ರಕರಣಗಳಲ್ಲಿ ಸಿಂಡ್ರೋಮಿಕ್ ವಿಧಾನ ಅನುಸರಿಸಿ ಸೋಂಕಿತರ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆಗೆ ನೆರವಾಗಲು ವೈದ್ಯರ ಸಲಹೆ ಮೇರೆಗೆ ಪೇಶಿಯೆಂಟ್ ನಂಬರ್ ನೀಡಲು ನಿರ್ಧರಿಸಲಾಗಿದೆ.


Leave a Reply