Bengaluru

೨೦೨೧-೨೨ರ ಆಸ್ತಿ ತೆರಿಗೆಗೆ ಸಂಪೂರ್ಣ ವಿನಾಯ್ತಿ ಘೋಷಿಸಿ: ನಾಗರಾಜ ಹೊಂಗಲ್


ಬೆAಗಳೂರು: ಕರೊನಾ ೨ನೇ ಅಲೆಯಿಂದ ರಾಜ್ಯದ ಜನತೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಸರಕಾರ, ೨೦೨೧-೨೨ನೇ ವರ್ಷದ ಆಸ್ತಿ ತೆರಿಗೆಗೆ ಸಂಪೂರ್ಣ ವಿನಾಯ್ತಿ ಘೋಷಿಸಬೇಕೆಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಅವರು ಆಗ್ರಹಿಸಿದ್ದಾರೆ.
ಕಳೆದ ವರ್ಷ ಕರೊನಾ ಬಿಕ್ಕಟ್ಟಿನಲ್ಲಿ ಆಂಧ್ರ, ತೆಲಂಗಾಣ, ಗುಜರಾತ್ ಸರಕಾರಗಳು ಆಸ್ತಿ ತೆರಿಗೆದಾರರಿಗೆ ಶೇ. ೫೦ಕ್ಕೂ ಹೆಚ್ಚು ರಿಯಾಯ್ತಿ ನೀಡಿದ್ದವು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುವ ಅವರು, ಇದೇ ಅವಧಿಯಲ್ಲಿ ಕರ್ನಾಟಕ ಸರಕಾರ ಶೇ. ೨೦ರಿಂದ ೩೫ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿ ಜನ ವಿರೋಧಿ ಧೋರಣೆ ಅನುಸರಿಸಿತ್ತು.
ಪ್ರಸಕ್ತ ವರ್ಷ ಆಸ್ತಿ ತೆರಿಗೆ ಹೆಚ್ಚಳಕ್ಕಾಗಿ ಸರಕಾರ ಕಾಯ್ದೆಯನ್ನೇ ಬದಲಾಯಿಸಿ ಗೊಂದಲ ಹುಟ್ಟು ಹಾಕಿದೆ. ಹೊಸ ಕಾಯ್ದೆ ಏನೆಂಬುದು ಜನರಿಗೆ ಅರ್ಥವಾಗಿಲ್ಲ. ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಹೊಸ ತೆರಿಗೆ ಪದ್ಧತಿಗೆ ವಿರೋಧ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೀಗಿದ್ದರೂ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ೨೦೨೧-೨೨ನೇ ಸಾಲಿಗಾಗಿ ಆಸ್ತಿ ತೆರಿಗೆ ಭರಣೆಯನ್ನು ಆರಂಭಿಸಿವೆ. ಕರೊನಾದ ಕರಾಳತೆ ಜನರ ಬದುಕಿನ ಅಸ್ತಿತ್ವಕ್ಕೇ ಪೆಟ್ಟು ಕೊಟ್ಟಿದೆ. ಲಾಕ್‌ಡೌನ್‌ನಿಂದಾಗಿ ಜನತೆ ದುಡಿಮೆಯನ್ನು ಕಳೆದುಕೊಂಡಿದ್ದಾರೆ. ಮಧ್ಯಮ ವರ್ಗದ ಜನತೆ, ರೈತ, ನೇಕಾರ, ಕಾರ್ಮಿಕ ಸಮುದಾಯಗಳು ಕಂಗಾಲಾಗಿವೆ. ಸರಕಾರ ಈ ವಾಸ್ತವತೆಯನ್ನು ಅರಿತುಕೊಂಡು ಪಕ್ಕದ ರಾಜ್ಯಗಳು ಆಸ್ತಿ ತೆರಿಗೆ ಸಂಗ್ರಹದ ವಿಚಾರದಲ್ಲಿ ಹೇಗೆ ಜನಸ್ನೇಹಿ ಆಗಿವೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ಕಳೆದ ವರ್ಷದ ತಪ್ಪು ಮತ್ತೆ ಮುಂದುವರಿಯಬಾರದು. ೨೦೨೧-೨೨ನೇ ಸಾಲಿನ ಆಸ್ತಿ ತೆರಿಗೆಗೆ ಸಂಪೂರ್ಣ ವಿನಾಯ್ತಿಯನ್ನು ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ಸಂಬAಧಿತ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಲ್ಲಾ ಸ್ಥಳೀಯ ಸಂಸ್ಥೆಗಳು ಪ್ರಸಕ್ತ ವರ್ಷದ ತೆರಿಗೆ ಭರಣೆ ಕಾರ್ಯವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಬೇಕೆಂದು ಹೊಂಗಲ್ ಅವರು ಮುಖ್ಯಮಂತಿಗಳನ್ನು ಕೇಳಿಕೊಂಡಿದ್ದಾರೆ.


Leave a Reply