BengaluruState

ವಾಹನ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ: ಡಿಸಿಎಂ ಸವದಿ


ಬೆಂಗಳೂರು: ಕೋವಿಡ್ 19ರ 2ನೇ ಅಲೆ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನು ಸಡಿಲಗೊಳಿಸಿ ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು

ಹೊರತುಪಡಿಸಿ) ಅನ್ವಯಿಸುವಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ ಟಿಡಿ 1 ಟಿಡಿಆರ್ 2021 ದಿನಾಂಕ: 12.04.2021 ಅನ್ವಯ ದಿನಾಂಕ: 15.04.2021 ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ:30.04.2021ರ ವರೆಗೆ ವಿಸ್ತರಿಸಿದ ಅವಧಿಯನ್ನು ಮತ್ತು ದಿನಾಂಕ:15.05.2021 ರೊಳಗಾಗಿ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ದಿನಾಂಕ:31.05.2021 ರವರೆಗೆ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ.


Leave a Reply