BelagaviState

ಪ್ರಂಟ್ ಲೈನ್ ವಾರಿಯರ್ಸ್ ಗೆ ಮೂರು ತಿಂಗಳ ವೇತನ ಬಿಟ್ಟ ಗಣೇಶ ಹುಕ್ಕೇರಿ


ಬೆಂಗಳೂರು: ಸಿಎಂ ಬಿಸ್ವೈ ಮನವಿಗೆ ಶಾಸಕ ಗಣೇಶ ಹುಕ್ಕೇರಿ ಸ್ಪಂದಿಸಿದ್ದು ತಮ್ಮ ಮೂರು ತಿಂಗಳದ ವೇತನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುವುದಾಗಿ ಹೇಳಿದ್ದಾರೆ.

ಈ ಕುರಿತು ತಮ್ಮ ಪೇಸಬುಕ್ ಖಾತೆಯಲ್ಲಿ ಮಾಸಿತಿ ಹಂಚಿಕೊಂಡಿರುವ ಅವರು ಈಗಾಗಲೇ ಒಂದು ತಿಂಗಳ ವೇತನವನ್ನು ಕೋವಿಡ್ ನಿಧಿಗೆ ನೀಡಲಾಗಿದ್ದು, ಮೂರು ತಿಂಗಳ ವೇತನವನ್ನು ಪ್ರಂಟ್ ಲೈನ್ ಕೋವಿಡ್ ವಾರಿಯರ್ಸ್ ಗೆ ನೀಡುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರ ಒಂದು ವರ್ಷದ ಹಾಗೂ ಶಾಸಕರ ಒಂದು ತಿಂಗಳ ವೇತನವನ್ನು ಕೋವಿಡ್ ನಿಧಿಗೆ ನೀಡಿ ಎಂದು ಮನವಿ ಮಾಡಿದ್ದರು.

ಗಣೇಶ ಹುಕ್ಕೇರಿ ಮುಖಪುಟದಲ್ಲಿ ಬರೇದಿದ್ದೇನು..?
“ರಾಜ್ಯ ಸರ್ಕಾರ‌ ನನಗೆ ನೀಡುವ ಸಂಬಳದಲ್ಲಿ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಮನವಿಯಂತೆ ಕೋವಿಡ್ ನಿಧಿಗೆ ನೀಡುತ್ತಿದ್ದೇನೆ.
ಅದನ್ನು ಹೊರತು ಪಡಿಸಿ, ಅದರ ಮುಂದಿನ ಮೂರು ತಿಂಗಳ ಸಂಬಳವನ್ನು ನನ್ನ ಕ್ಷೇತ್ರದ front line covid warriors ಗಳಾದ ಆಶಾಕಾರ್ಯಕರ್ತೆಯರಿಗೆ ನೀಡಲು ತೀರ್ಮಾನಿಸಿದ್ದೇನೆ.

ಇಂದು ಮೇ 1 ಕಾರ್ಮಿಕರ ದಿನಾಚರಣೆ, ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. ಕೊರೋನಾ ಮಹಾಮಾರಿಯನ್ನು ಹೊಡೆದೋಡಿಸಲು ಹಲವಾರು ಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ಹೋರಾಡುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಕಾರ್ಮಿಕರಲ್ಲಿ, ನಮ್ಮ ಆಶಾ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯವಾದುದು.

“ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು” ಎಂದು ಡಿ. ವಿ.ಗುಂಡಪ್ಪನವರು ಹೇಳಿದಂತೆ, ತಮ್ಮ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ಮನವಿಟ್ಟು ಮಾಡಿ, ನಮ್ಮ ನಾಡಿನ ಆರೋಗ್ಯ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಂಡು ಹೋಗುವಲ್ಲಿ ಬಹು ಮುಖ್ಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ನಮ್ಮ ಆಶಾ ಕಾರ್ಯಕರ್ತೆಯರು. ‘ಆಶಾ’ ಪದದ ಅರ್ಥ ‘ಭರವಸೆ'(Hope), ಎಂಬುದನ್ನೇನು ನಾನಿಲ್ಲಿ ವಿಶೇಷವಾಗಿ ಹೇಳಬೇಕಿಲ್ಲ. ಕೊರೋನಾ ಮಹಾಮಾರಿಯ ಜೊತೆ ನಾವೆಲ್ಲ ಹೋರಾಡುತ್ತಿರುವ ಅತಿ ಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ನಮ್ಮ ನಾಡಿಗೆ ಆಶಾಕಿರಣ(Ray of hope)ವಾಗಿದ್ದಾರೆ ಎಂದರೆ ತಪ್ಪಾಗಲಾರದು.

ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಸಮುದಾಯಕ್ಕೆ ತಿಳಿವಳಿಕೆ ನೀಡುವುದರಿಂದ ಹಿಡಿದು ಕ್ಷೇತ್ರದ ನಾಗರಿಕರಿಗೆಲ್ಲರಿಗೂ ಕೊರೋನಾ ಲಸಿಕೆಯನನ್ನು ಹಾಕಿಸುವವರೆಗೂ ಹಲವಾರು ಜವಾಬ್ದಾರಿಗಳನ್ನು ವಹಿಸುವ ಇವರ ಕಾರ್ಯ ಶ್ಲಾಘನಾರ್ಹ. ಹಾಗಾಗಿ ಈ ಕಾರ್ಯಕರ್ತೆಯರಿಗೆ ನನ್ನಿಂದ ಒಂದು ಪುಟ್ಟ ಕಾಣಿಕೆಯನನ್ನು ಈ ಕಾರ್ಮಿಕ ದಿನದಂದು ನೀಡಲು ಇಷ್ಟಪಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.


Leave a Reply