BengalurukaranatakaState

ಕೋವಿಡ್ ಲಸಿಕೆಗೆ ಹೆಚ್ಚುಹಣ ಕೇಳಿದರೆ ಹುಷಾರ್: ಸಿಎಂ ಯಡಿಯೂರಪ್ಪ


ಬೆಂಗಳೂರು: ಕೊರೊನಾ ಔಷಧಿ ಕಾಳಸಂತೆ ಮಾರಾಟಕ್ಕೆ ಬ್ರೆಕ್ ಹಾಕಲು ಸರಕಾರ ಸೂಕ್ತ ಕ್ರಮ ಕೈಗೊಂಡಿದ್ದು ಒಂದು ವೇಳೆ ಅಂತಹ ಸನ್ನಿವೇಷಗಳು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ಅಡಿಯಲ್ಲಿ ಕ್ರಮ ಜರಗಿಸಲಾಗುತ್ತದೆ ಎಂದು ಸಿಎಂ ಬಿಸ್ವೈ ಹೇಳಿದ್ದಾರೆ

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ ಮಾತನಾಡಿದ ಅವರು, ಕೊರೊನಾ  ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಲಸಿಕೆಗೆ ಹೆಚ್ಚು ದರ ತೆಗೆದುಕೊಂಡರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಿದೆ. ಕೇಂದ್ರದಿಂದ ಮೂರು ಲಕ್ಷ ಲಸಿಕೆ ಲಭ್ಯವಾಗಿದೆ. ನಮ್ಮ ಬಳಿ ಒಂದು ಲಕ್ಷ ಲಭ್ಯವಿದೆ. ಇನ್ನೂ ಹೆಚ್ಚು ಲಸಿಕೆ ಶೀಘ್ರದಲ್ಲೇ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.


Leave a Reply