vijayapur

ಮೊಟ್ಟೆ ಖರೀದಿಸಲು ನಮಗೆ ಸ್ವಾತಂತ್ರ್ಯ ಕೊಡಿ, ಅಂಗನವಾಡಿ ಕಾರ್ಯ ಕರ್ತೆಯರ ಆಗ್ರಹ


ವಿಜಯಪುರ: ಇಂಡಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಬಾಲವಿಕಾಸ ಸಲಹಾ ಸಮಿತಿ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ನೇರವಾಗಿ ತತ್ತಿ ಖರಿದಿ ಮಾಡಿ ಪಲಾನುಭವಿಗಳಿಗೆ ವಿತರಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘ ತಾಲೂಕ ಘಟಕದ ವತಿಯಿಂದ ಸಿಡಿಪಿಓ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ವತಿಯಿಂದ ಸಿಡಿಪಿಓ ಅವರಿಗೆ ಮನವಿ ಸಲ್ಲಿಸಲಾಯಿತು ನಂತರ ತಾಲೂಕ ಅಧ್ಯಕ್ಷರಾದ  ಭಾಗಮ್ಮ ಎಸ್ ಕುರತಳ್ಳಿ ಮಾತನಾಡಿ ವಿಜಯಪೂರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನೇರವಾಗಿ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಜಂಟಿ ಖಾತೆಗೆ ತತ್ತಿಯ ಹಣವನ್ನು ಜಮಾ ಮಾಡುತ್ತಾರೆ ಆ ಹಣದಿಂದ ಆ ಕೇಂದ್ರದ ಕಾರ್ಯಕರ್ತೆ ನೇರವಾಗಿ ತತ್ತಿ ಖರಿದಿ ಮಾಡಿ ಪಲಾನುಭವಿಗಳಿಗೆ ವಿತರಿಸುತ್ತಾರೆ ಆದರೆ ವಿಷಯ ಹಿಗಿರುವಾಗ ತಮ್ಮ ತಾಲೂಕಿನಲ್ಲಿ ಅಂದರೆ ಇಂಡಿ ತಾಲೂಕಿನ ಕಾರ್ಯಕರ್ತೆಯರು ಏನು ಪಾಪ ಮಾಡಿರುವರೊ? ಯಾವುದೇ ಒಬ್ಬ ಖಾಸಗಿ ವ್ಯಕ್ತಿಗೆ ಮೊಟ್ಟೆ ವಿತರಿಸಲು ಕೊಟ್ಟು ಹಣ ಲಪಟಾಯಿಸುವ ಕಾರ್ಯ ಮಾಡುತ್ತಿರುವವರು ಈಗ ಖಾಸಗಿ ವ್ಯಕ್ತಿಗೆ ಯಾವುದೇ ತತ್ತಿ ವಿತರಿಸಲು ಟೆಂಡರ ಕೊಡಬಾರದು ಉಳಿದ ಜಿಲ್ಲೆಯಲ್ಲಿಯ ಎಲ್ಲಾ ತಾಲೂಕಿನಲ್ಲಿ ಯಾವ ರೀತಿ ಕಾರ್ಯಕರ್ತೆ ನೇರವಾಗಿ ತತ್ತಿ ಖರಿದಿ ಮಾಡಿ ಪಲಾನುಭವಿಗಳಿಗೆ ವಿತರಿಸುತ್ತಾರೆ ಅದೇ ರೀತಿ ನಮ್ಮ ತಾಲೂಕಿನಲ್ಲಿ ಕೂಡಾ ಆಗಬೇಕು ಒಂದು ವೇಳೆ ಟೆಂಡರ್ ಕೊಟ್ಟದೆ ಆದಲ್ಲಿ ಕೇಂದ್ರ ಕಛೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ರಾಜ್ಯಧ್ಯಕ್ಷರಾದ ಶ್ರೀಮತಿ ಎನ್ ಎಸ್ ಬೊರಾವತ. ಪ್ರದಾನಕಾರ್ಯದರ್ಶಿ ಅಂಬಿಕಾ ಪಾಟೀಲ. ತಾಲೂಕ ಅಧ್ಯಕ್ಷೆ ಭಾಗಮ್ಮ ಕುರತಳ್ಳಿ,  ಪ್ರಭಾವತಿ ಬಿರಾದಾರ, ಜಯಶ್ರೀ ಗೊಡಬಂಡಿ, ನಂದಾ ಮಹೇಂದ್ರಕರ,  ಸರುಬಾಯಿ ರಾಠೊಡ,  ಆಶಾ ರಾಠೊಡ, ಸವಿತಾ ರಾಠೊಡ, ಗೀತಾ ಜಾಧವ, ಸುರೇಖಾ ದೊಡಮನಿ, ಕಾಶಿಭಾಯಿ ತುಂಭಗಿ, ಗಂಗುಬಾಯಿ ಕಲಬುರ್ಗಿ,  ವೀಣಾ ಕಂಗನಾಳ ಸೇರಿದಂತೆ ಮತ್ತಿತರರು ಇದ್ದರು.

ವರದಿ: ಬಿ ಎಸ್ ಹೊಸೂರ.


Leave a Reply